ಮೈಸೂರು: ಮಾಜಿ ಕಾರ್ಪೊರೇಟರ್ ಅಯಾಜ್ ಪಂಡು ಸಹೋದರನ ಭೀಕರ ಹತ್ಯೆ ನಡೆದಿದೆ. ಅಕ್ಮಲ್ ಹತ್ಯೆಗೊಳಗಾದ ದುರ್ದೈವಿ.ರಾಜೀವ್ ನಗರ ನಿಮ್ರಾ ಮಸೀದಿ ಬಳಿ ಇರುವ ಆರ್ಯ ಬೇಕರಿ ಮುಂಭಾಗ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ.ಸ್ಕೂಟರ್ ನಲ್ಲಿ ತೆರಳುತ್ತಿದ್ದ ಅಕ್ಮಲ್ ರನ್ನ ದುಷ್ಕರ್ಮಿಗಳ ತಂಡ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಫ್ಲೆಕ್ಸ್ ತೆರವು ಮಾಡಿದ ವಿಚಾರದಲ್ಲಿ ಮತ್ತೊಂದು ಗುಂಪಿನ ವರ್ತನೆಯನ್ನ ಖಂಡಿಸಿ ಬಹಿರಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದರು. ಇದೇ ವಿಚಾರದಲ್ಲಿ ಕೊಲೆ ನಡೆದಿರಬಹುದೆಂದ ಶಂಕಿಸಲಾಗಿದೆ.ಉದಯಗಿರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.