ಬೆಂಗಳೂರು :ಬೆಂಗಳೂರಿನಲ್ಲಿ ಸಾರ್ವಜನಿಕರಿಗೆ ನೀರಿನ ಸಮಸ್ಯೆಯಾದಾಗ ಚರಿತ್ರೆಯಲ್ಲಿಯೇ ಮೊಟ್ಟ ಮೊದಲ ಬಾರಿಗೆ ವಾಟರ್ ಟ್ಯಾಂಕರ್‌ಗಳ ಮಾಫಿಯಾಕ್ಕೆ ಕಡಿವಾಣ ಹಾಕಿದವರು ನಾವಾಗಿದ್ದೇವೆ. ಆದರೆ, ಏನು ಮಾಡೋದು ನಮ್ಮ ಮನೆಯ ಬೋರ್‌ವೆಲ್‌ನಲ್ಲೂ ನೀರಿಲ್ಲ. ಬೇರೆ ಕಡೆಯಿಂದ ನೀರು ತರಿಸುವ ಪ್ರಯತ್ನ ಮಾಡ್ತಾ ಇದ್ದೀವಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಪಕ್ಷದವರಿಗೆ ಟೀಕೆ ಮಾಡೋದು ಬಿಟ್ಟರೆ ಬೇರೆನೂ ಇಲ್ಲ. ಸಲಹೆ ಕೊಟ್ಟರೆ ನಾವು ಸ್ವೀಕಾರ ಮಾಡ್ತೀವಿ. ಬೆಂಗಳೂರಿನ ಚರಿತ್ರೆಯಲ್ಲೇ ಟ್ಯಾಂಕರ್ ಕಂಟ್ರೋಲ್ ಮಾಡಿರೋದು ನಾವು. ಈ ದಂಧೆಗೆ ಕಡಿವಾಣ ಹಾಕಿರೋದು ನಾವು. ಅವರಿಗೆ ಒಂದು ದರ ಫಿಕ್ಸ್ ಕುರಿತು ಅಧಿಕಾರಿಗಳು ಚರ್ಚೆ ಮಾಡಿದ್ದಾರೆ. ಕಾವೇರಿ ನೀರು ಹೆಚ್ಚಾಗಿ ಬರ್ತಾ ಇದೆ. ಆದರೆ, ಹಾಹಾಕಾರ ಇಲ್ಲ ಅಂತ ನಾವು ಹೇಳ್ತಾ ಇಲ್ಲ ಎಂದು ತಿಳಿಸಿದರು.
ಇನ್ನು ನಮ್ಮ ಮನೆಯಲ್ಲೂ ಬೋರ್ ವೆಲ್ ನಲ್ಲಿ ನೀರು ಇಲ್ಲ. ಬೇರೆ ಕಡೆಯಿಂದ ನೀರು ತರಿಸುವ ಪ್ರಯತ್ನ ಮಾಡ್ತಾ ಇದ್ದೀವಿ. ಕಾರು ತೊಳೆಯಲು, ದನ ಕರು ತೊಳೆಯಲು ಬಳಸಬೇಡಿ ಅಂತ ಹೇಳಿದ್ದೇವೆ. ಆರ್‌ಓ ವಾಟರ್ ಎಲ್ಲೆಲ್ಲಿ ಕೆಟ್ಟೋಗಿತ್ತೋ ಅದನ್ನ ಸರಿ ಮಾಡ್ತಾ ಇದ್ದೀವಿ. ಬೆಂಗಳೂರು ಗ್ರಾಮಾಂತರಕ್ಕೆ ಮಾತ್ರ ನೋಡಲ್ ಆಫೀಸರ್ ನೇಮಕ ವಿಚಾರವಾಗಿ ಮಾತನಾಡಿ, ಬೆಂಗಳೂರು ನಗರಕ್ಕೂ ಹಾಕಿದ್ದೇವೆ. ಬೆಂಗಳೂರು ಗ್ರಾಮಾಂತರ ಪೂರ್ತಿ ಬೋರ್ ವೆಲ್ ಗಳು ಇವೆ. ನಗರದಲ್ಲಿ ಕಾವೇರಿ ವಾಟರ್ ಬರುತ್ತದೆ. ಹಾಗಾಗಿ ಅಲ್ಲಿಗೆ ನೋಡಲ್ ಆಫೀಸರ್ ಗಳನ್ನ ಹಾಕಿದ್ದೇವೆ ಅಷ್ಟೆ. ಇನ್ನು ಬಿಜೆಪಿಯವರು ಪ್ರತಿಭಟನೆ ಮಾಡ್ತಾರೆ, ಮಾಡಲಿ ಬಿಡಿ. ಅವರನ್ಯಾರು ತಡೆಯಲ್ಲ ಎಂದು ಹೇಳಿದರು.