Saturday, April 19, 2025
Google search engine

Homeಅಪರಾಧಗುಜರಾತ್: ಕಟ್ಟಡ ಕುಸಿತ, ನಾಲ್ವರು ಗಾಯ

ಗುಜರಾತ್: ಕಟ್ಟಡ ಕುಸಿತ, ನಾಲ್ವರು ಗಾಯ

ಮೋರ್ಬಿ: ಗುಜರಾತ್‌ನ ಮೋರ್ಬಿಯಲ್ಲಿ ನಿರ್ಮಾಣ ಹಂತದಲ್ಲಿರುವ ವೈದ್ಯಕೀಯ ಕಾಲೇಜಿನ ಭಾಗವೊಂದು ಕುಸಿದ ಪರಿಣಾಮ ಕನಿಷ್ಠ ೪ ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಟ್ಟಡ ಕುಸಿದ ಸಂದರ್ಭದಲ್ಲಿ ಗಾಯಗೊಂಡ ನಾಲ್ವರು ಕಾರ್ಮಿಕರು ಮೇಲ್ಛಾವಣಿ ಸಿದ್ಧಪಡಿಸುತ್ತಿದ್ದರು. ಈ ಹಂತದಲ್ಲಿ ಸ್ಲಾಬ್ ಕುಸಿದ ಪರಿಣಾಮ ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಧಿಕಾರಿಗಳು ಮತ್ತು ಕಾಲೇಜು ಆಡಳಿತ ಮಂಡಳಿಯ ಸದಸ್ಯರು ಸ್ಥಳಕ್ಕೆ ಧಾವಿಸಿದರು. ಪರಿಸ್ಥಿತಿ ಅವಲೋಕಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು ಎಂದು ವರದಿಯಾಗಿದೆ. ಮತ್ತೊಬ್ಬ ಕಾರ್ಮಿಕ ಅವಶೇಷಗಳಡಿ ಸಿಲುಕಿದ್ದು, ಅವರನ್ನು ರಕ್ಷಿಸುವ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಇದೇ ಮೋರ್ಬಿಯಲ್ಲಿ ೨೦೨೨ರಲ್ಲಿ ತೂಗು ಸೇತುವೆ ಕುಸಿದು ೧೩೫ ಜನ ಮೃತಪಟ್ಟಿದ್ದರು.

RELATED ARTICLES
- Advertisment -
Google search engine

Most Popular