ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ
ಪಿರಿಯಾಪಟ್ಟಣ: ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ್ ತಿಳಿಸಿದರು.
ತಾಲೂಕಿನ ಕೋಮಲಾಪುರ ಗ್ರಾಮದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಮೈಸೂರಿನ ಇಲವಾಲ ಬಳಿಯ ನಂಜಮ್ಮ ಜವರೇಗೌಡ ಆಸ್ಪತ್ರೆ ಸಹಯೊಗದೊಂದಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ನಾವು ಉತ್ತಮ ಜೀವನ ನಡೆಸಲು ಆರೋಗ್ಯ ಪ್ರಮುಖ ಕಾರಣವಾಗಿದೆ ಇದರಲಿ ಸ್ವಲ್ಪ ಏರುಪೇರಾದರು ನಿರ್ಲಕ್ಷ ವಹಿಸದೆ ತಕ್ಷಣ ಹತ್ತಿರದ ಆಸ್ಪತ್ರೆಗೆ ಧಾವಿಸಿ ವೈದ್ಯಾಧಿಕಾರಿಗಳಿಂದ ಸೂಕ್ತ ಚಿಕಿತ್ಸೆ ಪಡೆಯುವಂತೆ ತಿಳಿಸಿದರು.
ಮುಖಂಡರಾದ ಶಿವರಾಜ್ ಅವರು ಮಾತನಾಡಿ ನಾವು ಉತ್ತಮ ಆರೋಗ್ಯಕರ ಜೀವನ ನಡೆಸಲು ನಾವು ಸೇವಿಸುವ ಆಹಾರ ಪದಾರ್ಥ ಸಹ ಕಾರಣವಾಗಿವೆ ಗುಣಮಟ್ಟದ ಪೌಷ್ಟಿಕ ಆಹಾರ ಸೇವಿಸಿ ಕಾಯಿಲೆಗಳಿಂದ ದೂರವಿರುವಂತೆ ತಿಳಿಸಿದರು.
ಕಾಂಗ್ರೆಸ್ ಯುವ ಘಟಕ ಅಧ್ಯಕ್ಷ ಹರೀಶ್ ಹಾಗೂ ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಸ್ ಸ್ವಾಮಿಗೌಡ ಅವರು ಮಾತನಾಡಿ ಗ್ರಾಮಾಂತರ ಪ್ರದೇಶದ ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಇಂತಹ ಶಿಬಿರ ಸಹಕಾರಿಯಾಗಲಿವೆ ಎಂದು ತಿಳಿಸಿ ಶಿಬಿರ ಆಯೋಜಕರಿಗೆ ಧನ್ಯವಾದ ತಿಳಿಸಿದರು.
ಈ ಸಂದರ್ಭ ನಂಜಮ್ಮ ಜವರೇಗೌಡ ಆಸ್ಪತ್ರೆ ಮಾರ್ಕೆಟಿಂಗ್ ಮ್ಯಾನೇಜರ್ ಮಹೇಶ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಶಾಂತ್, ತಜ್ಞವೈದ್ಯರಾದ ಡಾ.ಸಿಂಧು, ಡಾ.ಮನು ಪ್ರಕಾಶ್, ಡಾ.ಸತೀಶ್ ದುರ್ಗೇಶ್, ಡಾ.ಮಮತಾ,
ಡಾ.ಸುದೀಶ್ ದುರ್ಗೇಶ್ ಮತ್ತು ಸಿಬ್ಬಂದಿ ಗ್ರಾಮದ ನಿವೃತ್ತ ಆರೋಗ್ಯ ಇಲಾಖೆ ಅಧಿಕಾರಿ ಸೋಮೇಗೌಡ ಮತ್ತು ಗ್ರಾಮಸ್ಥರು ಇದ್ದರು.
