ಮಂಡ್ಯ: ಕೆರೆಕಟ್ಟೆಗಳಲ್ಲಿ ಅಂತರ್ಜಲ ಕುಸಿತದಿಂದಾಗಿ ರೈತರು ಕಂಗೆಟ್ಟಿದ್ದು, ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಲು ಜನರ ಹರಸಾಹಸ ಪಡುತ್ತಿದ್ದಾರೆ. ಬಿಂದಿಗೆಗಳ ಮೂಲಕ ಕುರಿ, ಮೇಕೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದಾರೆ.
ಮಂಡ್ಯ ತಾಲ್ಲೂಕಿನ ಮೊತ್ತಹಳ್ಳಿ ಗ್ರಾಮದಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಬಿಂದಿಗೆ, ಬಕೆಟ್ ಹಿಡಿದು ಜಾನುವಾರುಗಳ ಜೊತೆ ರೈತರು ಹೋರಾಟ ನಡೆಸಿದ್ದಾರೆ.
ಜಮೀನಿನ ಬಳಿ ಕುರಿ, ಮೇಕೆ ಮೇಯುವ ಜಾನುವಾರುಗಳಿಗೆ ಮನೆಯಿಂದಲೇ ಬಿಂದಿಗೆಯಲ್ಲಿ ನೀರು ತಂದು ನೀರುಣಿಸುತ್ತಿದ್ದಾರೆ. ಈಗಾಗಲೇ ನೀರಿಲ್ಲದೆ ಕೆರೆಕಟ್ಟೆಗಳು, ಭತ್ತಿರುವ ಬೋರ್ ವೆಲ್ ಗಳು ಒಣಗಿವೆ. ಕೃಷಿಗೆ ನೀರು ಕೊಡದಿದ್ದರು ಜಾನುವಾರುಗಳಿಗೆ ನೀಡು ಒದಗಿಸಲು ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.