Saturday, April 19, 2025
Google search engine

Homeರಾಜ್ಯಸುದ್ದಿಜಾಲರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಕೃಷ್ಣರಾಜ ವಿಧಾನಸಭಾ ಕ್ಷೇತ್ರಕ್ಕೆ 200 ಕೋಟಿ ರೂ ಅನುದಾನ ಬಿಡುಗಡೆ- ಶಾಸಕ...

ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಕೃಷ್ಣರಾಜ ವಿಧಾನಸಭಾ ಕ್ಷೇತ್ರಕ್ಕೆ 200 ಕೋಟಿ ರೂ ಅನುದಾನ ಬಿಡುಗಡೆ- ಶಾಸಕ ಡಿ.ರವಿಶಂಕರ್

ಮತದಾರರಿಗೆ ಏರ್ಪಡಿಸಿದ್ದ ಕೃತಜ್ಞತಾ ಸಮರ್ಪಣಾ ಸಮಾರೋಪ ಸಮಾರಂಭ

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ರಾಜ್ಯ ಕಾಂಗ್ರೆಸ್ ಸರಕಾರ ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಇದುವರೆಗೆ ೨೦೦ ಕೋಟಿ ರೂ.ಅನುದಾನ ಬಿಡುಗಡೆ ಮಾಡಿದೆ ಎಂದು ಶಾಸಕ ಡಿ.ರವಿಶಂಕರ್ ತಿಳಿಸಿದರು.
ತಾಲೂಕಿನ ದೇವಿತಂದ್ರೆ ಗ್ರಾಮದಲ್ಲಿ ಸೋಮವಾರ ಮತದಾರರಿಗೆ ಏರ್ಪಡಿಸಿದ್ದ ಕೃತಜ್ಞತಾ ಸಮರ್ಪಣಾ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಸಿಎಂ ವಿಶೇಷ ಅನುದಾನ,ಲೋಕೋಪಯೋಗಿ ಸೇರಿದಂತೆ ನಾನಾ ಇಲಾಖೆಗಳಡಿ ಒಟ್ಟು ೨೦೦ ಕೋಟಿ ರೂ.ಅನುದಾನ ಬಿಡುಗಡೆಯಾಗಿದ್ದು,ಈಗಾಗಲೇ ಕೆಲವೆಡೆ ಕಾಮಗಾರಿಯೂ ಶುರುವಾಗಿದೆ’ ಎಂದರು.

ಕೆಸ್ತೂರು ಕೊಪ್ಪಲು ಭಾಗಕ್ಕೆ ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು ೫೦ ಕೋಟಿ ಮಂಜೂರಾಗಿದ್ದು,ಮುಖ್ಯಮ0ತ್ರಿಗಳು ಬಜೆಟ್‌ನಲ್ಲೆ ಪ್ರಕಟಿಸಿದ್ದಾರೆ.ಸಾಲಿಗ್ರಾಮದಲ್ಲಿ ತಾಲೂಕು ಆಸ್ಪತ್ರೆ ನಿರ್ಮಾಣ ಸೇರಿದಂತೆ ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿ ನಿಟ್ಟಿನಲ್ಲಿ ಅನುದಾನ ತರಲು ನಿರಂತರ ಶ್ರಮಿಸಲಾಗುವುದು’ ಎಂದು ಹೇಳಿದರು.

೨೦ ವರ್ಷದ ಬಳಿಕ ಅಧಿಕಾರ:ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಕಂಡು ೨೦ ವರ್ಷವಾಗಿತ್ತು.ನಮ್ಮ ಪಕ್ಷದ ಕಾರ್ಯಕರ್ತರು ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರೂ ಬೇರೆ ಪಕ್ಷದ ಬಾಗಿಲು ತಟ್ಟದೆ ಛಲ,ಸ್ವಾಭಿಮಾನದಿಂದ ಕಾಂಗ್ರೆಸ್‌ಗೆ ಅಭೂತಪೂರ್ವ ವಿಜಯ ತಂದುಕೊಟ್ಟಿದ್ದಾರೆ.

ಗೆಲುವು ನನ್ನದಲ್ಲ. ನಿಷ್ಟಾವಂತ ಪ್ರತಿಯೊಬ್ಬ ಕಾರ್ಯಕರ್ತನಿಗೂ ಕಾಂಗ್ರೆಸ್‌ನ ಜಯ ಸಲ್ಲಬೇಕು’ ಎಂದರು. ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿನುಡಿದಂತೆ ನಡೆದ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳೆ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರೀ ರಕ್ಷೆಯಾಗಲಿದೆ. ರಾಜ್ಯದಲ್ಲಿ ಭೀಕರ ಬರವಿದ್ದರೂ ಕೇಂದ್ರ ಸರಕಾರ ಸ್ಪಂದಿಸಲಿಲ್ಲ.ನಮ್ಮ ಪಾಲಿನ ನ್ಯಾಯಯುತ ತೆರಿಗೆ ಪಾಲನ್ನು ನೀಡುತ್ತಿಲ್ಲ.ಮುಂಬರುವ ಚುನಾವಣೆಯಲ್ಲಿ ಜನವಿರೋಧಿ ಕೇಂದ್ರದ ಎನ್‌ಡಿಎ ಸರಕಾರವನ್ನು ಕಿತ್ತೊಗೆಯಿರಿ’ ಎಂದರು.

ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು,ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೀಗೌಡ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯ ಕುಮಾರ್,ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ.ರಮೇಶ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಮಹದೇವ್, ವಕ್ತಾರ ಸಯ್ಯದ್ ಜಾಬೀರ್,ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್,ಮುಖoಡರಾದ ಮಿರ್ಲೆ ನಂದೀಶ್, ಎಸ್.ಕೆ.ಪ್ರಭಾಕರ್,ಮಹಿಳಾ ಘಟಕದ ರಾಣಿ,ದಮ್ಮನಹಳ್ಳಿ ಫಾಲಾಕ್ಷ,ಎಸ್.ಎಸ್.ಸಂದೇಶ್,ಜಯoತ್,ಕೆಡಗ ನಟರಾಜ್,ಹಾಡ್ಯ ಮಹದೇವಸ್ವಾಮಿ,ಹೆಚ್.ಟಿ.ಮಂಜು,ವೆoಕಟೇಶ್,ರಾಜಯ್ಯ,ಶ್ರೀನಿವಾಸ್,ಶಿವರಾo,ಸಾಲಿಗ್ರಾಮ ಮಂಜು,ಗಾಯನಹಳ್ಳಿ ನಟರಾಜ್ ಸೇರಿದಂತೆ ನೂರಾರು ಮುಖಂಡರು.ಕಾರ್ಯಕರ್ತರು ಇದ್ದರು.
ಚಿತ್ರಶೀರ್ಷಿಕೆ:ಸಾಲಿಗ್ರಾಮ ತಾಲೂಕಿನ ದೇವಿತಂದ್ರೆ ಗ್ರಾಮದಲ್ಲಿ ಸೋಮವಾರ ಮತದಾರರಿಗೆ ಏರ್ಪಡಿಸಿದ್ದ ಕೃತಜ್ಞತಾ ಸಮಾರೋಪ ಸಮಾರಂಭವನ್ನು ಶಾಸಕ ಡಿ.ರವಿಶಂಕರ್ ಉದ್ಘಾಟಿಸಿದರು.ಮಂಡ್ಯ ಲೋಕಸಭಾ ಅಭ್ಯರ್ಥಿ ಸ್ಟಾರ್ ಚಂದ್ರು ಇದ್ದರು.

ಮಂಡ್ಯ ಕ್ಷೇತ್ರದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ನನಗೆ ಮತದಾರರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ಎಲ್ಲಾ ಶಾಸಕರು,ಮುಖಂಡರ,ಕಾರ್ಯಕರ್ತರ ಒಮ್ಮತದ ಅಭ್ಯರ್ಥಿಯಾದ ನನಗೆ ಗೆಲುವು ಖಚಿತ ಎಂದು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ ವಿರೋಧಿ ಅಭ್ಯರ್ಥಿ ಯಾರೇ ಆಗಿರಲಿ, ಗೆಲುವಿನ ಅಂತರ ಮುಖ್ಯವಲ್ಲ.ನನ್ನ ಜಯ ಖಚಿತ. ಟಿಕೆಟ್ ಘೋಷಣೆಯಾದ ಬಳಿಕ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದೇನೆ. ಎಲ್ಲಾ ದೇಗುಲಗಳಲ್ಲಿ ಬಲಗಡೆ ಹೂವಾಗಿದೆ. ಇದು ನನ್ನ ಗೆಲುವಿನ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು. ಶ್ರೀರಂಗಪಟ್ಟಣ,ನಾಗಮoಗಲ, ಮoಡ್ಯ, ಮದ್ದೂರಿನಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದೇನೆ. ಮಳವಳ್ಳಿ, ಪಾಂಡವಪುರದಲ್ಲೂ ಸಭೆ ಕರೆದಿದ್ದು,ಚುನಾವಣಾ ಪ್ರಚಾರವನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು.ನುಡಿದಂತೆ ನಡೆದಿರುವ ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನಗಳೆ ನನ್ನ ಗೆಲುವಿಗೆ ಶ್ರೀ ರಕ್ಷೆ’ಎಂದರು.

RELATED ARTICLES
- Advertisment -
Google search engine

Most Popular