Sunday, April 20, 2025
Google search engine

Homeಸ್ಥಳೀಯಕ್ರೀಡೆ ಮನುಷ್ಯನ ಆರೋಗ್ಯವನ್ನು ವೃದ್ಧಿಸುತ್ತದೆ: ಎಂ.ಎಲ್.ಸಿ ಮಂಜೇಗೌಡ

ಕ್ರೀಡೆ ಮನುಷ್ಯನ ಆರೋಗ್ಯವನ್ನು ವೃದ್ಧಿಸುತ್ತದೆ: ಎಂ.ಎಲ್.ಸಿ ಮಂಜೇಗೌಡ


ಮೈಸೂರು: ಕ್ರೀಡೆ ಮನುಷ್ಯನ ಆರೋಗ್ಯವನ್ನು ವೃದ್ಧಿಗೊಳಿಸುವುದರ ಜೊತೆಗೆ ಮನಸ್ಸಿನಲ್ಲಿರುವ ನೋವುಗಳನ್ನು ಮರೆಯಲು ಸಹಕಾರಿಯಾಗಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ತಿಳಿಸಿದರು.

ಜಿಲ್ಲಾಡಳಿತ-ಜಿಲ್ಲಾ ಪಂಚಾಯತ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ರಾಜ್ಯ ಸರ್ಕಾರಿ ನೌಕರರ ಮೈಸೂರು ಜಿಲ್ಲಾ ಮಟ್ಟದ ಕ್ರೀಡಾ ಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯ ಉದ್ಘಾಟನಾ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರಿ ನೌಕರರಿಗೆ ಒತ್ತಡ ಏಕೆ ಹೆಚ್ಚಾಗುತ್ತಿದೆ ಎಂದರೆ ಒಬ್ಬರಿಗೆ ಎರಡು, ಮೂರು ಹುದ್ದೆಗಳ ಜವಬ್ದಾರಿ ಕೊಟ್ಟಿರುವುದರಿಂದ ಅದಕ್ಕೆ ನಾನು ವಿಧಾನಪರಿಷತ್‌ನಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದೇನೆ.

ಜಿಲ್ಲೆಯ ಎಲ್ಲಾ ನೌಕರರು ಒಂದೇ ಕಡೆ ಸೇರುವ ಅವಕಾಶವಾಗಿದೆ. ಮನುಷ್ಯ ಆರೋಗ್ಯವಾಗಿರಲು ಯೋಗ, ವಾಕಿಂಗ್ ಜೊತೆಗೆ ಯಾವುದಾದರೊಂದು ಕ್ರೀಡೆಯಲ್ಲಿ ಭಾಗವಹಿಸಬೇಕು. ಕ್ರೀಡೆಗೆ ಯಾವುದೇ ಜಾತಿ, ಭೇದವಿಲ್ಲ. ಈ ಕ್ರೀಡೆ ಆಡಲು ಐ.ಎ.ಎಸ್, ಕೆ.ಎ.ಎಸ್, ಅಧಿಕಾರಿಗಳ ಮಕ್ಕಳು ಬರುವುದಿಲ್ಲ. ಎಲ್ಲರೂ ಗ್ರಾಮೀಣ ಭಾಗದಿಂದ ಬಂದವರೆ ಹೆಚ್ಚಾಗಿದ್ದೀರಿ. ಅಂತರ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಭಾಗವಹಿಸಿದ ಕ್ರೀಡಾ ಪಟುಗಳು ಇಲ್ಲಿ ಇದ್ದಿರಿ ಎಲ್ಲರಿಗೂ ಶುಭವಾಗಲಿ ಎಂದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ.ಕೆ.ವಿ. ಮಾತನಾಡಿ ನಿಮ್ಮ ಪ್ರತಿಭೆಯನ್ನು ತೋರಿಸಲು ಇದೊಂದು ಸುವರ್ಣ ಅವಕಾಶ ಆಟವನ್ನು ಕ್ರೀಡಾ ಸ್ಫೂರ್ತಿಯಿಂದ ಆಡಬೇಕು. ನಾನು ಕೆಲಸದ ಒತ್ತಡಗಳಿಂದ ಆಟ ಆಡುವುದನ್ನೇ ಬಿಟ್ಟಿದ್ದೇನೆ, ಮನಸ್ಸಿನ ಒತ್ತಡ ಕಡಿಮೆ ಮಾಡಿಕೊಳ್ಳಲು ಕ್ರೀಡೆ ಅಗತ್ಯವಾಗಿದೆ. ಕ್ರೀಡೆಯಿಂದ ಮನುಷ್ಯ ದೈಹಿಕವಾಗಿ ಸಧೃಢವಾಗಿರುವುದರೊಂದಿಗೆ ಆತ್ಮವಿಶ್ವಾಸವು ಹೆಚ್ಚಾಗುತ್ತದೆ. ನೀವೆಲ್ಲರೂ ಆಗಲೇ ಗೆದ್ದಾಗಿದೆ, ಕಡಿಮೆ ಅವಧಿಯಲ್ಲಿ ಉತ್ತಮವಾಗಿ ಆಯೋಜನೆ ಮಾಡಿದ್ದೀರಿ ಎಲ್ಲರಿಗೂ ಶುಭವಾಗಲಿ ಎಂದರು.
ಸಮಾರಂಭದಲ್ಲಿ ಜಿ.ಪಂ. ಸಿ.ಇ.ಒ ಗಾಯತ್ರಿ, ನಗರ ಪಾಲಿಕೆ ಆಯುಕ್ತರಾದ ಡಾ|| ಎಂ.ಎನ್. ಮಧು, ಅಪರ ಜಿಲ್ಲಾಧಿಕಾರಿ ಶಿವರಾಜು, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್, ಕನ್ನಡ ಸಂಸ್ಕೃತಿ ಇಲಾಖೆಯ ಡಾ|| ಸುದರ್ಶನ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಜೆ.ಗೋವಿಂದರಾಜು, ಜಿಲ್ಲಾ ಕಾರ್ಯದರ್ಶಿ ರೇವಣ್ಣ, ಎ.ಎಲ್. ಉಮೇಶ್, ಸಿ.ಎಸ್. ರಮೇಶ್‌ಕುಮಾರ್, ಎಂ.ಎಲ್. ವಿಶ್ವನಾಥ್, ಮಾಲಂಗಿ ಸುರೇಶ್, ಎಸ್.ಜೆ. ರಮೇಶ್, ಹೆಚ್.ಎಂ. ಗಿರೀಶ್, ಗಣೇಶ್.ಎನ್.ಕೆ, ಎನ್.ಎಂ. ಅಕ್ಕಮ್ಮ ಹಾಜರಿದ್ದರು.

RELATED ARTICLES
- Advertisment -
Google search engine

Most Popular