ಮಂಗಳೂರು(ದಕ್ಷಿಣ ಕನ್ನಡ): ಸಿ.ಎ.ಎ ವಿರೋಧಿಸಿ ದಕ್ಷಿಣ ಕನ್ನಡದಲ್ಲಿ ರಾತ್ರಿ ಎಸ್ ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರಮಝಾನ್ ಆರಂಭ ದಿನದಂದು ಉಪವಾಸ ವೃತ ಮುಗಿಸಿ ರಾತ್ರಿಯೇ ದ.ಕ. ಜಿಲ್ಲೆಯಾದ್ಯಂತ ಸಾರ್ವಜನಿಕರೊಂದಿಗೆ ಸೇರಿ ಎಸ್ ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕೇಂದ್ರ ಸರಕಾರ ಕೂಡಲೇ ಈ ಕಾನೂನನ್ನು ವಾಪಸು ಪಡೆಯಬೇಕು. ರಾಜ್ಯ ಕಾಂಗ್ರೆಸ್ ಸರಕಾರ ಈ ಕಾಯ್ದೆಯನ್ನು ತಿರಸ್ಕರಿಸಿ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎಸ್ ಡಿಪಿಐ ಪಕ್ಷದ ಗ್ರಾಮ, ವಾರ್ಡ್, ಬ್ಲಾಕ್ ಮಟ್ಟದಲ್ಲಿ ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಉಳಾಯಿಬೆಟ್ಟು, ಸಜಿಪನಡುವು, ಬಂಟ್ವಾಳ, ಕಲ್ಲೇರಿ, ಪುಂಜಾಲ್’ಕಟ್ಟೆ, ಬದ್ರಿಯಾನಗರ, ಮಲ್ಲೂರು, ಕಕ್ಕಿಂಜೆಯಲ್ಲಿ ಪ್ರತಿಭಟನೆ ನಡೆಸಲಾಯಿತು.
