ಮಡಿಕೇರಿ : ನಾಪೋಕ್ಲು ವ್ಯಾಪ್ತಿಯ ಬಲ್ಲಮಾವಟಿ ಗ್ರಾಮ ಪಂಚಾಯಿತಿಯಲ್ಲಿ 1.70 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಗ್ರಾಮಗಳ ಅಭಿವೃದ್ಧಿಗೆ ಪಣ ತೊಡಲಾಗಿದೆ ಎಂದು ತಿಳಿಸಿದರು. ಅಭಿವೃದ್ಧಿ ವಿಚಾರದಲ್ಲಿ ಎಲ್ಲರ ವಿಶ್ವಾಸ ಪಡೆದು ಕಾರ್ಯನಿರ್ವಹಿಸಲಾಗುವುದು. ಆ ನಿಟ್ಟಿನಲ್ಲಿ ಎಲ್ಲರ ಸಹಕಾರ ಅತ್ಯಗತ್ಯ ಎಂದು ಹೇಳಿದರು. ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರಾದ ನೆರವಂಡ ಉಮೇಶ್, ಪ್ರಮುಖರಾದ ಇಸ್ಮಾಯಿಲ್, ತೆನ್ನಿರಾ ಮೈನಾ, ಬಾಚಮಂಡ ಲವಚಿನ್ನಪ್ಪ, ತಾಪಂಡ ಅಪ್ಪಣ್ಣ, ಚೋಕಿರ ಬಾಬಿ ಭೀಮಯ್ಯ, ಮಚ್ಚುರ ರವೀಂದ್ರ, ಕೊಣಿಯಂಡ ರಾಜೀವಿ, ಮುಕ್ಕಾಟ್ಟೀರ ಸುತ ಸುಬ್ಬಯ್ಯ, ಮಣವಟ್ಟಿರ ಹರೀಶ್, ಬಾಳೆಯಡ ದೀನಾ ಪೂವಮ್ಮ, ಪಿಡಿಒ ಪೂಣಚ್ಚ, ಚೆಂಗೆಟೀರ ಕುಶಾಲಪ್ಪ, ಮಿಥುನ್, ಮಣವಟ್ಟಿರ ದಯಾ ಸೇರಿದಂತೆ ಹಲವರು ಇದ್ದರು.