ಚಾಮರಾಜನಗರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ವಿದ್ವಾಂಸರು ಹಾಗೂ ಸಾಹಿತಿಗಳು ಆಗಿದ್ದ ಮಲೆಯೂರು ಗುರುಸ್ವಾಮಿ ರವರ ಪುಣ್ಯಸ್ಮರಣೆ ಕಾರ್ಯಕ್ರಮ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿತು.
ಮಲೆಯೂರು ಗುರುಸ್ವಾಮಿ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಸಲ್ಲಿಸುವ ಮೂಲಕ ಮಾತನಾಡಿದ ಅಂಕಣಕಾರ ಎಸ್. ಲಕ್ಷ್ಮೀನರಸಿಂಹ ಮಲೆಯೂರು ಗುರುಸ್ವಾಮಿ ಅಪಾರ ವಿಚಾರವನ್ನು ತಿಳಿದ ವಿದ್ವಾಂಸರು.
ಮೈಸೂರು ಭಾಗದ ಯಾವುದೇ ವಿಷಯಗಳನ್ನು ಅಧ್ಯಯನ ಶೀಲ ವಿಚಾರಗಳನ್ನು ತಿಳಿಸುವಲ್ಲಿ ಅವರು ಪ್ರಸಿದ್ಧರು . ಚಾಮರಾಜನಗರ ಜಿಲ್ಲೆಯ ಕನಕಗಿರಿಯಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ನಿಲ್ಲಿಸುವಲ್ಲಿ ಇವರ ಪಾತ್ರ ದೊಡ್ಡದು. ಹರದನಹಳ್ಳಿಯ ಸಿದ್ದಲಿಂಗೇಶ್ವರ ದೇವಾಲಯದ ಬಗ್ಗೆ ನಾಡಿನ ಗಮನಸೆಳೆದು ಪುನರುಸ್ಥಾನಗೊಲಿಸಲು ಇವರ ಮಾರ್ಗದರ್ಶನ ಇತ್ತು. ಅವರ ಮಹಾಯಾತ್ರಿಕ ,ಅಪ್ರತಿಮ ವೀರ, ಕಪಿಲೇ ಹರಿದಳು ಕಡಲಿಗೆ ಕೃತಿಗಳು ಬಹುದೊಡ್ಡ ಹೆಸರನ್ನು ತಂದು ಕೊಟ್ಟಿದ್ದು, ನಾಡಿನಲ್ಲೆ ಬಹಳಷ್ಟು ಓದುಗರನ್ನು ಸಂಪಾದಿಸಿದರು ಎಂದರು. ಸಾಹಿತಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಕನ್ನಡದ ಸೇವೆಯನ್ನು ಸಲ್ಲಿಸಿದ ಮಲೆಯರು ಗುರುಸ್ವಾಮಿಯನ್ನು ಸ್ಮರಿಸಿಕೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸುವುದು ನಮ್ಮ ಅಭಿಮಾನವೇ ಆಗಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಮೂರು ಬಾರಿ ಜಿಲ್ಲಾ ಅಧ್ಯಕ್ಷರಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದವರಲ್ಲಿ ಮಲೆಯರು ಗುರುಸ್ವಾಮಿಯವರು ಗಣ್ಯರು. ಗಡಿ ಭಾಗದ ಚಾಮರಾಜನಗರ ಜಿಲ್ಲೆಯಲ್ಲಿ ಕನ್ನಡದ ನೆಲ ,ಜಲ, ಭಾಷೆ ಮತ್ತು ಸಾಹಿತ್ಯ, ವಿಚಾರವಂತ ವಿಷಯಗಳನ್ನು ಅಪಾರವಾಗಿ ಸಂಗ್ರಹಿಸಿದ್ದರು. ಯಾವುದೇ ಸಂದರ್ಭದಲ್ಲಿ ವಿಚಾರವನ್ನು ಮಂಡಿಸುವ ಮೂಲಕ ಸಭಿಕರನ್ನು ತಮ್ಮ ಮಾತಿನ ಮೂಲಕ ಗಮನ ಸೆಳೆಯುತ್ತಿದ್ದರು. ಸಾಹಿತಿಗಳಾಗಿ, ವಿದ್ವಾಂಸರಾಗಿ ,ಜೆಎಸ್ಎಸ್ ಕಾಲೇಜಿನ .ಪ್ರಾಧ್ಯಾಪಕರಾಗಿ ನೂರಾರು ಓದುಗರನ್ನು ಹಾಗೂ ವಿದ್ಯಾರ್ಥಿಗಳನ್ನು ಹೊಂದಿದ್ದ ಮಗು ಎಂದೇ ಪ್ರಸಿದ್ಧರಾಗಿದ್ದ ಮಲೆಯೂರು ಗುರುಸ್ವಾಮಿ ಅವರ ಸಾಹಿತ್ಯ ಕೃತಿಗಳ ಮೂಲಕ ಮತ್ತು ಅವರ ಕನ್ನಡ ಕಟ್ಟುವಿಕೆಯ ಮೂಲಕ ಸದಾ ಜೀವಂತವಾಗಿದ್ದಾರೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ರವಿಚಂದ್ರಪ್ರಸಾದ್ ,ಸಿದ್ದಲಿಂಗ ಮೂರ್ತಿ, ವೆಂಕಟೇಶ್ ಬಾಬು,ವೀರಶೆಟ್ಟಿ ಗೋವಿಂದರಾಜು ಮುಂತಾದವರು ಉಪಸ್ಥಿತರಿದ್ದರು.