Sunday, April 20, 2025
Google search engine

Homeಸ್ಥಳೀಯವರ್ಷವಿಡೀ ವಸ್ತುಪ್ರದರ್ಶನ ಚಟುವಟಿಕೆಗೆ ಚಿಂತನೆ:  ಅಯೂಬ್ ಖಾನ್

ವರ್ಷವಿಡೀ ವಸ್ತುಪ್ರದರ್ಶನ ಚಟುವಟಿಕೆಗೆ ಚಿಂತನೆ:  ಅಯೂಬ್ ಖಾನ್

ಮೈಸೂರು: ಕರ್ನಾಟಕ ವಸ್ತು ಪ್ರದರ್ಶನದ ಪ್ರದರ್ಶನಗಳು ದಸರಾ ಸಂದರ್ಭದ ಮೂರ್ನಾಲ್ಕು ತಿಂಗಳುಗಳಿಗೆ ಸೀಮಿತವಾಗಿದ್ದು ವರ್ಷಪೂರ್ತಿ ಚಟುವಟಿಕೆಯಿಂದಿರಲು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ಪ್ರಾಧಿಕಾರದ ಅಧ್ಯಕ್ಷರಾದ ಆಯೂಬ್ ಖಾನ್ ಅವರು ಮಾಹಿತಿ ನೀಡಿದರು.

ಇಂದು ನಗರದ ವಸ್ತು ಪ್ರದರ್ಶನ ಪ್ರಧಿಕಾರದ ಸಭಾಂಗಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನು ಮುಂದೆ ಮೈಸೂರಿನ ಇತರೆ ಸ್ಥಳಗಳಲ್ಲಿ ನಡೆಯುವ ವಸ್ತುಪ್ರದರ್ಶನಗಳು ಪ್ರಾಧಿಕಾರದ ಆವರಣದಲ್ಲಿಯೇ ಆಯೋಜಿಸಲು ನಿಯಮ ರೂಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಹಾಗೂ ನಗರದ ಬೇರೆ ಬೇರೆ ಮೈದಾನಗಳಲ್ಲಿ ವಸ್ತು ಪ್ರದರ್ಶನ ನಡೆಸಲು ಪರವಾನಾಗಿಯನ್ನು ನೀಡಬಾರದೆಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದು, ಯಾರೇ ಆಗಲಿ ವಸ್ತು ಪ್ರದರ್ಶನದ ಮಳಿಗೆಗಳನ್ನು ವಸ್ತು ಪ್ರದರ್ಶನ ಪ್ರಧಿಕಾರದ ಅವರಣದಲ್ಲಿಯೇ ಇಡಬೇಕು. ಅದಕ್ಕೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಜವಾಬ್ದಾರಿ ಪ್ರಾಧಿಕಾರದ್ದಾಗಿದೆ ಎಂದರು.

ಈ ರೀತಿಯಾಗಿ ಬೇರೆ ಬೇರೆ ಸ್ಥಳಗಳಲ್ಲಿ ಆಟದ ಮೈದಾನಗಳನ್ನು ಬಳಸಿಕೊಂಡು ಪ್ರದರ್ಶನ ಆಯೋಜಿಸುವುದರಿಂದ ಕ್ರೀಡಾರ್ಥಿಗಳಿಗೆ, ಪಾರ್ಕಿಂಗ್ ವ್ಯವಸ್ಥೆಗೆ, ಕುಡಿಯುವ ನೀರು, ಟ್ರಾಫಿಕ್ ಇತ್ಯಾದಿ ಮೂಲಭೂತ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ನಮ್ಮ ವಸ್ತು ಪ್ರದರ್ಶನ ಆವರಣದಲ್ಲಿ ಎಲ್ಲಾ ರೀತಿಯ ಅನುಕೂಲಗಳು ಇರುವುದರಿಂದ ಇನ್ನು ಮುಂದೆ ಯಾವುದೇ ವಸ್ತು ಪ್ರದರ್ಶನವು ಕೂಡ ಪ್ರದರ್ಶನದ ಆವರಣದಲ್ಲಿಯೇ ಏರ್ಪಡಬೇಕು ಎಂದರು.

ವಸ್ತು ಪ್ರದರ್ಶನದ ‘ಎ’ ಬ್ಲಾಕ್ ಅನ್ನು ಹೆರಿಟೇಜ್ ವಿನ್ಯಾಸ ಮಾಡಿ, ಪ್ರಸ್ತುತ ಇರುವ ಫೌಂಟೈನ್ ಅನ್ನು ಮ್ಯೂಸಿಕಲ್ ಫೌಂಟೈನ್ ಅನ್ನಾಗಿ ಮಾಡಿ ಸಾರ್ವಜನಿಕರನ್ನು ಆಕರ್ಷಸಲಾಗುತ್ತದೆ. ಇದರಿಂದ ಹೆಚ್ಚಿನ ಪ್ರವಾಸಿಗರು ಆಗಮಿಸಲು ಸಹಕಾರಿಯಾಗಿದೆ ಎಂದರು.

ಏಪ್ರಿಲ್ ಮತ್ತು ಮಾರ್ಚ್ ತಿಂಗಳಲ್ಲಿ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿದ್ದು, ಆಸಕ್ತರಿಂದ ಅರ್ಜಿಗಳು ದಾಖಲಾಗುತ್ತಿವೆ ಎಂದು ತಿಳಿಸಿದರು.

 ಮೈಸೂರಿನಲ್ಲಿ ಯೂನಿಟಿ ಮಾಲ್ : ದೇಶದಾದ್ಯಂತ ಯೂನಿಟಿ ಮಾಲ್ ಸ್ಥಾಪಿಸಲು ಕೇಂದ್ರ ಸರ್ಕಾರವು ಅನುಧಾನವನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ರಾಜ್ಯಕ್ಕೆ 193 ಕೋಟಿ ಬಿಡುಗಡೆಯಾಗಿದೆ. ಇದರಿಂದ ಬೆಂಗಳೂರಿನಲ್ಲಿ ಯೂನಿಟಿ ಮಾಲ್ ಸ್ಥಾಪಿಸಬೇಕು ಎಂಬ ಚಿಂತನೆಗಳಿದ್ದು, ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರ ಆಶಯದಂತೆ ಮೈಸೂರಿನಲ್ಲಿ ಯೂನಿಟಿ ಮಾಲ್ ಸ್ಥಾಪಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದೆಂದರು.

ಏನಿದು ಯೂನಿಟಿ ಮಾಲ್ : ದೇಶದ ಎಲ್ಲಾ ರಾಜ್ಯಗಳಿಂದ  ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ತಮ್ಮ ತಮ್ಮ ರಾಜ್ಯ ಮತ್ತು ಜಿಲ್ಲೆಯ ಉತ್ಪನ್ನಗಳು  ದೊರೆಯುವ ಮಳಿಗೆಗಳನ್ನು ಒಂದೇ ಸ್ಥಳದಲ್ಲಿ ಸ್ಥಾಪಿಸುವುದಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಪ್ರಾಧಿಕಾರದ ಸಿಇಒ ರಾಜೇಶ್ ಗೌಡ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular