Sunday, April 20, 2025
Google search engine

Homeಕ್ರೀಡೆಮಾ.16ರಿಂದ ಕ್ರಿಕೆಟ್ ಪಂದ್ಯಾವಳಿ

ಮಾ.16ರಿಂದ ಕ್ರಿಕೆಟ್ ಪಂದ್ಯಾವಳಿ

ಮೈಸೂರು: ಎಡಿನ್ ಬ್ರಿಡ್ಜ್ ಫೌಂಡೇಶನ್ ಮತ್ತು ಮೈಸೂರು ಹೆಚ್.ಆರ್.ಫೋರಮ್ ಸಂಸ್ಥೆಗಳು ಎನ್‌ಐಇ ಕಾಲೇಜು, ಟಾಟಾ ಮೋಟಾರ್ಸ್ ಮತ್ತು ಫೋರ್ ಫ್ರಂಟ್ ಹೆಲ್ತ್ ಕೇರ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮಾ.೧೬ರಿಂದ ನಗದ ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಎನ್‌ಐಇ ಉತ್ತರ ಕಾಲೇಜು ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಎಂ.ಫಣೀಶ್ ತಿಳಿಸಿದರು.

ಮಾ.೧೬ರಂದು ಬೆಳಗ್ಗೆ ೭.೩೦ಕ್ಕೆ ಪಂದ್ಯಾವಳಿ ಉದ್ಘಾಟನೆಗೊಂಡ ಬಳಿಕ ಮಾ. ೧೭, ೨೩, ೨೪, ೩೦ ಮತ್ತು ೩೧, ಏ.೬ ಮತ್ತು ೭ರಂದು ಪಂದ್ಯಗಳು ನಡೆಯಲಿವೆ. ಈ ಬಾರಿ ಮಹಿಳೆಯರಿಗೂ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲಾಗಿದೆ. ಕ್ರೀಡಾಕೂಟವನ್ನು ಸಾಮಾಜಿಕ ಕಾರಣಕ್ಕಾಗಿ ನಡೆಸಲಾಗುತ್ತಿದ್ದು ಕ್ರೀಡಾಕೂಟದಲ್ಲಿ ಸಂಗ್ರಹವಾದ ಹಣವನ್ನು ಒಂದು ಸಾಮಾಜಿಕ ಕಾರ್ಯಕ್ಕೆ ಬಳಸಲಾಗುವುದು ಎಂದರು. ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್, ಗಾಯಕ ವಿಜಯ್ ಪ್ರಕಾಶ್, ನಟಿ ಹರಿಪ್ರಿಯಾ, ಮತ್ತು ನಟರಾದ ಪ್ರಮೋದ್ ಮತ್ತು ಶ್ರುತಿ ನಾಯ್ಡು ಸೇರಿದಂತೆ ಹಲವರು ವಿವಿಧ ದಿನಗಳಂದು ಹಾಜರಿದ್ದು, ಕ್ರಿಕೆಟ್ ಪಟುಗಳಿಗೆ ಸ್ಪೂರ್ತಿ ತುಂಬಲಿದ್ದಾರೆಂದರು.

RELATED ARTICLES
- Advertisment -
Google search engine

Most Popular