ಮಂಡ್ಯ: ಕಬ್ಬು ಸಾಗಾಣಿಕೆ ಮಾಡಿಕೊಳ್ಳದೆ ಸಕ್ಕರೆ ಕಾರ್ಖಾನೆ ನಿರ್ಲಕ್ಷ್ಯ ವಹಿಸಿದ್ದು, ಕಟಾವು ಮಾಡಿದ ಕಬ್ಬು ಬೀದಿಯಲ್ಲೆ ಒಣಗುತ್ತಿರೋದನ್ನ ನೋಡಿ ಅನ್ನದಾತ ಹೈರಾಣಾಗಿದ್ದಾನೆ.
ನಂಜನಗೂಡಿನ ಬಣ್ಣಾರಿ ಷುಗರ್ಸ್ ಕಾರ್ಖಾನೆಯ ನಿರ್ಲಕ್ಷ್ಯಕ್ಕೆ ರಸ್ತೆ ಬದಿ ಅನ್ನದಾತನ ಕಬ್ಬು ಬೆಳೆ ಒಣಗುತ್ತಿದೆ. ಮಂಡ್ಯ ತಾಲೂಕಿನ ಸುತ್ತಮುತ್ತ ರೈತರ ಕಬ್ಬು ಕಟಾವು ಮಾಡಿ ಬೆಳೆಕೊಂಡೊಯ್ಯದೇ ಬಣ್ಣಾರಿ ಕಾರ್ಖಾನೆ ನಿರ್ಲಕ್ಷ್ಯ ವಹಿಸಿದೆ.

ಕಾರ್ಖಾನೆ ನಿರ್ಲಕ್ಷ್ಯದಿಂದ ಬೀದಿಯಲ್ಲೆ ನೂರಾರು ಟನ್ ಕಬ್ಬು ಬೆಳೆ ಒಣಗುತ್ತಿದೆ. ಕಾರ್ಖಾನೆ ನಿರ್ಲಕ್ಷ್ಯದ ವಿರುದ್ಧ ಅನ್ನದಾತರು ಆಕ್ರೋಶ ಹೊರಹಾಕಿದ್ದು, ಅನ್ನದಾತರ ನೆರವಿಗೆ ಬರುವಂತೆ ಜಿಲ್ಲಾಡಳಿತಕ್ಕೆ ರೈತರು ಮನವಿ ಮಾಡಿದ್ದಾರೆ.
ಬರದ ನಡುವೆ ಇದೀಗ ಕಬ್ಬು ಬೆಳೆದಿರೋ ರೈತರಿಗೆ ಕಾರ್ಖಾನೆ ನಿರ್ಲಕ್ಷ್ಯದಿಂದ ನಷ್ಟವಾಗುವ ಚಿಂತೆ ಕಾಡುತ್ತಿದೆ.