ಮಂಡ್ಯ: ಉದ್ಯೋಗ ಖಾತ್ರಿಯ ಕೂಲಿ ಹಣ ಬಿಡುಗಡೆಗೆ ಒತ್ತಾಯಿಸಿ ಸಂಸದೆ ಸುಮಲತಾ ಕಚೇರಿ ಬಳಿ ಕೃಷಿ ಕೂಲಿಕಾರರು ಧರಣಿ ಕುಳಿತಿದ್ದಾರೆ.
ಮಂಡ್ಯ ಡಿಸಿ ಕಚೇರಿ ಬಳಿಯಿರುವ ಸಂಸದರ ಕಚೇರಿ ಮುಂದೆ ಧರಣಿ ಕುಳಿತಿದ್ದು, ಸಂಸದೆ ಸುಮಲತಾ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.

ಕಳೆದ 5 ವರ್ಷಗಳಿಂದ ಸಂಸದೆ ಸುಮಲತಾ ಮಂಡ್ಯಕ್ಕೆ ಏನು ಮಾಡಲಿಲ್ಲ. ಸಂಸತ್ ನಲ್ಲಿ ಧ್ವನಿ ಎತ್ತಿ ಕೂಲಿಕಾರರ ಹಣ ಬಿಡುಗಡೆ ಮಾಡಿಸಲು ಮನವಿ ಮಾಡಲಾಗಿತ್ತು. ಸಂಸದರು ಕೂಡಲೇ ಕೂಲಿಕಾರರ ಹಣ ಬಿಡುಗಡೆ ಮಾಡಿಸುವಂತೆ ಆಗ್ರಹ ಮಾಡಲಾಗಿದೆ.
ಕೃಷಿ ಕೂಲಿಕಾರರ ಸಂಘದ ಕಾರ್ಯದರ್ಶಿ ಹನುಮೇಶ್, ಕೃಷ್ಣೇಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.