Saturday, April 19, 2025
Google search engine

Homeರಾಜ್ಯಯಲ್ಲಾಪುರ: ಗ್ಯಾಸ್ ಟ್ಯಾಂಕರ್, ಲಾರಿ ನಡುವೆ ಅಪಘಾತ- ಸಂಚಾರ ಅಸ್ತವ್ಯಸ್ತ

ಯಲ್ಲಾಪುರ: ಗ್ಯಾಸ್ ಟ್ಯಾಂಕರ್, ಲಾರಿ ನಡುವೆ ಅಪಘಾತ- ಸಂಚಾರ ಅಸ್ತವ್ಯಸ್ತ

ಯಲ್ಲಾಪುರ: ಗ್ಯಾಸ್ ಟ್ಯಾಂಕರೊಂದು ಲಾರಿಗೆ ಢಿಕ್ಕಿ ಹೊಡೆದು ಹೆದ್ದಾರಿ ಮಧ್ಯೆ ಉರುಳಿಬಿದ್ದ ಪರಿಣಾಮ ರಸ್ತೆ ಸಂಚಾರಕ್ಕೆ ಅಡ್ಡಿಯಾದ ಘಟನೆ ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ಅರಬೈಲ್ ಘಟ್ಟದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಲಾರಿ ಮತ್ತು ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆ ಹೊರಟಿದ್ದ ಗ್ಯಾಸ್ ಟ್ಯಾಂಕರ್ ಮಧ್ಯೆ ಅಪಘಾತ ಸಂಭವಿಸಿ ಟ್ಯಾಂಕರ್ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಇದರಿಂದ ರಸ್ತೆ ಸಂಚಾರದಲ್ಲಿ ಕೆಲ ಕಾಲ ವ್ಯತ್ಯಯವುಂಟಾಯಿತು. ಘಟನೆಯಲ್ಲಿ ಯಾರಿಗೂ ಯಾವುದೇ ತರಹದ ಗಂಭೀರ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಟ್ಯಾಂಕರ್ ನಲ್ಲಿ ಅನಿಲ ಸೋರಿಕೆಯಾಗುವ ಸಂಭವವೂ ಉಂಟಾಯಿತಲ್ಲದೇ ರಾತ್ರಿಯಾದ್ದರಿಂದ ಕಾರ್ಯಾಚರಣೆಗೂ ಸಮಸ್ಯೆಯಾಯಿತೆನ್ನಲಾಗಿದೆ.

ತೀರಾ ತುರ್ತು ಇದ್ದ ಕೆಲವು ವಾಹನಗಳು ಶಿರಸಿ ಮಾರ್ಗವಾಗಿ ಕಾರವಾರ ಅಂಕೋಲಾ ಕುಮಟಾ ಕಡೆಗೆ ಹೋದವು. ಟ್ಯಾಂಕರ್ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.

RELATED ARTICLES
- Advertisment -
Google search engine

Most Popular