Monday, April 21, 2025
Google search engine

HomeUncategorizedರಾಷ್ಟ್ರೀಯಪೆಟ್ರೋಲ್​, ಡೀಸೆಲ್​ ಬೆಲೆ ಎರಡು ರೂ. ಇಳಿಕೆ

ಪೆಟ್ರೋಲ್​, ಡೀಸೆಲ್​ ಬೆಲೆ ಎರಡು ರೂ. ಇಳಿಕೆ

ನವದೆಹಲಿ: ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ಪ್ರತಿ ಲೀಟರ್​ ಗೆ ಎರಡು ರೂಪಾಯಿ ಕಡಿಮೆಯಾಗಿದೆ.  

ಪೆಟ್ರೋಲ್​ ಮತ್ತು ಡೀಸೆಲ್ ​ನ ಪರಿಷ್ಕೃತ ಬೆಲೆಯು ಮಾರ್ಚ್ 15ರ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಅನ್ವಯವಾಗಲಿದೆ ಎಂದು ತೈಲ ಸಚಿವಾಲಯ ಗುರುವಾರ ಸಂಜೆ ತಿಳಿಸಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಈಗ ಲೀಟರ್‌ಗೆ 96.72 ರೂ.ಗೆ ಇದೆ. ಹೊಸ ದರ 94.72 ರೂ.ಗಳಾಗಿದ್ದು, ಡೀಸೆಲ್ ಬೆಲೆ ಪ್ರಸ್ತುತ 89.62 ರೂ. ಇದ್ದು, ಹೊಸ ದರ 87.62 ರೂ. ಆಗಲಿದೆ.

ಸಾರ್ವತ್ರಿಕ ಚುನಾವಣೆಗೆ ದಿನಾಂಕ ಮುನ್ನವೇ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇಂಧನ ದರ ಪರಿಷ್ಕರಣೆಯಲ್ಲಿ ಸುಮಾರು ಎರಡು ವರ್ಷಗಳ ನಂತರ ತಮ್ಮ ಬಿಗಿಪಟ್ಟನ್ನು ಸಡಿಲಿಕೆ ಮಾಡಿವೆ. ಸರ್ಕಾರವು ಸುಮಾರು 10 ವರ್ಷಗಳ ಹಿಂದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ತನ್ನ ನಿಯಂತ್ರಣದಿಂದ ಮುಕ್ತಗೊಳಿಸಿತ್ತು. ಇದರಿಂದ ತೈಲ ದರಗಳನ್ನು ತೈಲ ಕಂಪನಿಗಳೇ ನಿಗದಿಪಡಿಸಿ ಘೋಷಿಸುತ್ತಿವೆ. ಆದರೆ, ಗುರುವಾರ ಸಂಜೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಪೆಟ್ರೋಲ್ ಮತ್ತು ಡೀಸೆಲ್ ದರ ಪರಿಷ್ಕರಣೆ ಕುರಿತು ಘೋಷಣೆ ಮಾಡಿದೆ.

RELATED ARTICLES
- Advertisment -
Google search engine

Most Popular