Tuesday, April 22, 2025
Google search engine

Homeರಾಜಕೀಯಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ಅಂತಿಮ: ಬೇಸರವಿಲ್ಲ ಎಂದ ಮಂಗಲಾ ಅಂಗಡಿ

ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ಅಂತಿಮ: ಬೇಸರವಿಲ್ಲ ಎಂದ ಮಂಗಲಾ ಅಂಗಡಿ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಜಗದೀಶ್ ಶೆಟ್ಟರ್ ಅವರ ಹೆಸರು ಬಹುತೇಕ ಅಂತಿಮವಾಗಿದೆ. ಅವರೂ ಸಹ ಸಮ್ಮತಿಸಿದ್ದಾರೆ. ಇದರಿಂದ ನಮಗೇನು ಬೇಸರ ಆಗಿಲ್ಲ ಎಂದು ಸಂಸದೆ ಮಂಗಲಾ ಸುರೇಶ ಅಂಗಡಿ ಹೇಳಿದರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕುಟುಂಬದಲ್ಲಿ ನನಗೆ ಅಥವಾ ನಮ್ಮ ಮಕ್ಕಳಾದ ಶ್ರದ್ಧಾ ಇಲ್ಲವೇ ಸ್ಪೂರ್ತಿ ಅವರಿಗೆ ಟಿಕೆಟ್ ಸಿಗಬೇಕು ಎಂಬ ಆಸೆಯಿತ್ತು. ಈಗಲೂ ಹೈಕಮಾಂಡ್ ಪಟ್ಟಿಯಲ್ಲಿ ನಮ್ಮ ಹೆಸರುಗಳಿವೆ. ಇದರಿಂದ ಇನ್ನೂ ಆಸೆ ಕಳೆದುಕೊಂಡಿಲ್ಲ ಎಂದರು.

ಎರಡನೇ ಪಟ್ಟಿಯಲ್ಲಿ ನಮ್ಮ ಹೆಸರು ಇಲ್ಲ ಎಂದು ಗೊತ್ತಾಗಿ ಪಕ್ಷದ ವರಿಷ್ಠರನ್ನು ಭೇಟಿಯಾಗಲು ದೆಹಲಿಗೆ ಹೋಗಿದ್ದೆ. ಅಷ್ಟರಲ್ಲಿ ಜಗದೀಶ್ ಶೆಟ್ಟರ್ ಹೆಸರು ಫೈನಲಾಗಿದೆ ಎಂದು ತಿಳಿದು ಯಾವುದೇ ನಾಯಕರನ್ನು ಭೇಟಿಯಾಗದೆ ವಾಪಸ್ ಬಂದೆ. ಜಗದೀಶ್ ಶೆಟ್ಟರ್ ಅವರ ಹೆಸರು ಅಂತಿಮವಾಗಿದ್ದರೆ ಸಹಜವಾಗಿಯೇ ಸ್ವಲ್ಪಮಟ್ಟಿಗೆ ಟಿಕೆಟ್ ಸಿಗಲಿಲ್ಲ ಎಂದು ಬೇಸರವಾಗುತ್ತದೆ. ಆದರೆ ನಾಯಕರ ನಿರ್ಧಾರವನ್ನು ನಾವು ಒಪ್ಪಿಕೊಳ್ಳಲೇ ಬೇಕಾಗುತ್ತದೆ ಎಂದು ಮಂಗಲಾ ಅಂಗಡಿ ಹೇಳಿದರು.

ಜಗದೀಶ್ ಶೆಟ್ಟರ್ ಸಹ ನಮ್ಮ ಮನೆಯವರೇ. ಅವರ ಪರವಾಗಿ ಮುಕ್ತ ಮನಸ್ಸಿನಿಂದ ಪ್ರಚಾರ ಮಾಡುತ್ತೇವೆ ಎಂದು ಮಂಗಲಾ ಅಂಗಡಿ ಹೇಳಿದರು.

RELATED ARTICLES
- Advertisment -
Google search engine

Most Popular