ಮಂಡ್ಯ: ಲೋಕಸಭಾ ಚುನಾವಣೆ ಹಿನ್ನಲೆ ಜೆಡಿಎಸ್ ಬೃಹತ್ ಸಭೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪಾಲ್ಗೊಳ್ಳಲಿರುವ ಹಿನ್ನಲೆ ಬಾಂಬ್ ಪತ್ತೆ ದಳ ವೇದಿಕೆಯನ್ನು ಸಂಪೂರ್ಣವಾಗಿ ತೀವ್ರ ಶೋಧಿಸಿತು.
ಮಂಡ್ಯದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಭೆ ನಡೆಯುತ್ತಿದ್ದು, ಕೆಲವೇ ಕ್ಷಣದಲ್ಲಿ ಜೆಡಿಎಸ್ ಸಭೆ ಆರಂಭವಾಗಲಿದೆ.
ಈಗಾಗಲೇ ಮಾಜಿ ಸಚಿವ ಡಿಸಿ ತಮ್ಮಣ್ಣ, ಡಾ.ಕೆ.ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ ಸೇರಿದಂತೆ ಹಲವರು ಸಭೆಗೆ ಆಗಮಿಸಿದ್ದಾರೆ.
ಅಂಬೇಡ್ಕರ್ ಭವನದ ಒಳ, ಹೊರಾವರಣದಲ್ಲಿ ಜೆಡಿಎಸ್ ಕಾರ್ಯಕರ್ತರು ತುಂಬಿ ತುಳುಕುತ್ತಿದ್ದಾರೆ.