ಯಳಂದೂರು: ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದ ಮಾಜಿ ಶಾಸಕ ಎಸ್. ಜಯಣ್ಣರವರನ್ನು ಅವರ ಅಭಿಮಾನಿಗಳು ಶುಕ್ರವಾರ ಅಭಿನಂದಿಸಿದರು.
ಬೆಂಗಳೂರಿನ ಉಗ್ರಾಣ ಭವನದಲ್ಲಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಯಳಂದೂರು ಹಾಗೂ ಕೊಳ್ಳೇಗಾಲದ ಇವರ ಅಭಿಮಾನಿಗಳ ಹಾಜರಿದ್ದರು. ಈ ಸಂದರ್ಭದಲ್ಲಿ ಎಸ್. ಜಯಣ್ಣ ಮಾತನಾಡಿ, ತಮಗೆ ಈ ಹಿಂದೆ ಪರಿಶಿಷ್ಟ ಜಾತಿ, ವರ್ಗಗಳ ನಿಗಮದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿತ್ತು ಇದು ನನಗೆ ವೈಯುಕ್ತಿವಾಗಿ ಬೇಸರ ತಂದಿತ್ತು. ನಾನು ಈ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಈ ಬಗ್ಗೆ ಚರ್ಚಿಸಿ ಇದನ್ನು ಬದಲಿಸಿ ಕೊಡುವಂತೆ ಮನವಿ ಮಾಡಿದ್ದೆ.
ಸಾರ್ವಜನಿಕ ಸಂಪರ್ಕದಲ್ಲಿ ನಾನು ಸದಾ ಇರಲು ಬಯಸುವ ವ್ಯಕ್ತಿಯಾಗಿದ್ದು ಇದನ್ನು ಬದಲಿಸುವಂತೆ ಮನವಿ ಮಾಡಿದ್ದೆ. ನನ್ನ ಮನವಿಗೆ ಸ್ಪಂಧಿಸಿದ ಸಿದ್ಧರಾಮಯ್ಯ ನನಗೆ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿ ನೇಮಕಗೊಳಿಸಿದ್ದಾರೆ. ಇವರು ನನ್ನ ಮೇಲಿಟ್ಟಿದ್ದ ನಂಬಿಕೆಯನ್ನು ಹುಸಿಗೊಳಿಸದೆ. ಈ ಸ್ಥಾನಕ್ಕೆ ಸಂಪೂರ್ಣವಾದ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುತ್ತೇನೆ. ಇದರೊಂದಿಗೆ ಇಲ್ಲಿನ ಆಡಳಿತ ವ್ಯವಸ್ಥೆಯನ್ನು ಸುಧಾರಿಸಿ ಜನಪರವಾದ ಕೆಲಸಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ನಗರಸಭಾ ಅಧ್ಯಕ್ಷ ಮಲ್ಲಿಕಾರ್ಜುನಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್ ಮುಖಂಡರಾದ ಪರಶಿವಮೂರ್ತಿ, ಹಂಪಾಪುರ ಬಸವಣ್ಣ, ಕೊಪ್ಪಾಳಿ ಮಹದೇವನಾಯಕ, ವಡಗೆರೆ ಮಹದೇವ್, ನಾಗರಾಜ್, ಬಸ್ತೀಪುರ ಶಾಂತರಾಜ್, ಶಿವಕುಮಾರ್, ನಂಜುಂಡಸ್ವಾಮಿ, ಮಾಂಬಳ್ಳಿ ನಂಜುಂಡಸ್ವಾಮಿ, ಮುಡಿಗುಂಡ ಶಾಂತರಾಜ್, ರಾಜು, ಬಸವಶೆಟ್ಟಿ, ಶಂಕರಮೂರ್ತಿ, ವೈ.ಕೆ.ಮೋಳೆ ನಾಗರಾಜು, ಅಗರವೆಂಕಟೇಶ್, ಮನೋಹರ್, ಗೌಡಹಳ್ಳಿ ರಾಜೇಶ್, ಉದಯಶಂಕರ್, ಪಿ. ಮಾದೇಶ್, ವೆಂಕಟೇಶ್, ನಾಗರಾಜ್ ಸೇರಿದಂತೆ ಅನೇಕರು ಇದ್ದರು.