ಚಾಮರಾಜನಗರ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಬೇಗೂರು ಉಪ ವಿಭಾಗ ವ್ಯಾಪ್ತಿಯಲ್ಲಿ ೪ನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಹಾಗೂ ಸಂತೇಮರಹಳ್ಳಿ ಉಪ ವಿಭಾಗ ವ್ಯಾಪ್ತಿಯಲ್ಲಿ ೬೬/೧೧ ಕೆವಿ ಸಂತೇಮರಹಳ್ಳಿ ವಿದ್ಯುತ್ ಮಾರ್ಗವನ್ನು ಲಿಲೋ ಮಾರ್ಗವಾಗಿ ಮಾರ್ಪಾಡು ಮಾಡುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ೬೬/೧೧ ಕೆವಿ ವಿದ್ಯುತ್ ವಿತರಣಾಕೇಂದ್ರದಿಂದ ಸರಬರಾಜಾಗುವ ಎಲ್ಲಾ ೧೧ ಕೆವಿ ಮಾರ್ಗಗಳಿಗೆ ನಾಳೆ ಮಾರ್ಚ್ ೧೭ರಂದು ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ನಾಳೆ ಬೆಳಿಗ್ಗೆ ೯ ರಿಂದ ಸಂಜೆ ೫ ಗಂಟೆಯವರೆಗೆ ಹಾಲಳ್ಳಿ, ಕಮರಹಳ್ಳಿ, ಬೊಗ್ಗನಪುರ, ಮರಳಾಪುರ, ರಂಗನಾಥಪುರ, ತೊರವಳ್ಳಿ, ನಿಟ್ರೆ, ಹಿರಿಕಾಟಿ, ಚಿಕ್ಕಾಟಿ, ಅರೆಪುರ, ತೊಂಡವಾಡಿ ಹಾಗೂ ಹಿರಿಕಾಟಿ, ನಿಟ್ರೆ, ಬೇಗೂರು, ವಾಟರ್ ಸಪ್ಲೈ, ಹೆಗ್ಗಡಹಳ್ಳಿ, ಮಂಚಳ್ಳಿ ಎನ್.ಜೆ.ವೈ, ಶೆಟ್ಟಹಳ್ಳಿ, ದೇಸಿಪುರ, ಇಂಡಸ್ಟ್ರಿಯಲ್, ಹೊರೆಯಾಲ ಮತ್ತು ಕಬ್ಬಳ್ಳಿ, ಸೋಮಳ್ಳಿ, ಪಡಗೂರು, ಬೆಳಚಲವಾಡಿ, ನಿಟ್ರೆ, ಅಗತಗೌಡನಹಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಲಿಲೋ ಮಾರ್ಗದ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ ೬.೩೦ ರಿಂದ ಸಂಜೆ ೫.೩೦ ಗಂಟೆಯವರೆಗೆ ಸಂತೇಮರಹಳ್ಳಿ, ಸಂತೇಮರಹಳ್ಳಿ ಮೋಳೆ, ಹೊಸಮೋಳೆ, ಕೆಂಪನಪುರ, ಚುಂಗಡಿಪುರ, ಮಹಂತಾಳಪುರ, ಹುಲ್ಲೇಪುರ, ನಡುಕಲಮೋಳೆ, ಬಸವಟ್ಟಿ, ತೆಳ್ಳನೂರು, ಕಾವುದವಾಡಿ, ಬಾಣಹಳ್ಳಿ, ಹೆಗ್ಗವಾಡಿ, ಮೂಡಲಅಗ್ರಹಾರ, ವಿವೇಕಾನಂದ ಕಾಲೋನಿ, ಹೆಗ್ಗವಾಡಿಪುರ, ದೇಶವಳ್ಳಿ, ಕುದೇರು, ದೇಮಹಳ್ಳಿ, ಕಮರವಾಡಿ, ಹೆಬಚಹಳ್ಳಿ, ಅಂಕಶೆಟ್ಟಿಮೋಳೆ, ದೇಮಹಳ್ಳಿಮೋಳೆ, ಕೊನ್ನುಂಡಿ ಯಲಕ್ಕೂರು, ತೆಂಕಲಮೋಳೆ, ಬಡಗಲಮೋಳೆ, ಅಂಬಳೆ, ಕಂದಹಳ್ಳಿ, ದುಗ್ಗಹಟ್ಟಿ, ಹೊನ್ನೂರು ಗ್ರಾಮಗಳು ಹಾಗೂ ಐಪಿ ಲಿಮಿಟ್ ಗಳ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸಾರ್ವಜನಿಕರು ನಿಗಮದ ಜೊತೆ ಸಹಕರಿಸಬೇಕು. ವಿದ್ಯುತ್ ಸಂಬಂಧಿತ ದೂರು ಮತ್ತು ಸಹಾಯಕ್ಕಾಗಿ ಉಚಿತ ದೂ.ಸಂ ೧೯೧೨ ಸಂಪರ್ಕಿಸುವಂತೆ ನಿಗಮದ ಚಾಮರಾಜನಗರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.