ಕೊಲ್ಕತ್ತಾ: ಬಂಗಾಳದ ಕಾರ್ಪೊರೇಟ್ ಕಂಪನಿಗಳು ಚುನಾವಣಾ ಬಾಂಡ್ ಮೂಕ ವಿವಿಧ ರಾಜಕೀಯ ಪಕ್ಷಗಳಿಗೆ ೧೬೦೦ ಕೋಟಿ ರೂಪಾಯಿ ದೇಣಿಗೆ ನೀಡಿವೆ. ಎಸ್ ಬಿಐ ಪ್ರಕಟಿಸಿದ ಮಾಹಿತಿಯ ಪ್ರಕಾರ, ರಾಜ್ಯದ ೨೫ಕ್ಕೂ ಹೆಚ್ಚು ಕಾರ್ಪೊರೇಟ್ ಸಮೂಹಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿವೆ.
ಸಂಜಯ್ ಗೊಯಂಕಾ ಗ್ರೂಪ್, ಐಟಿಸಿ, ಕೆವೆಂಟರ್ ಗ್ರೂಪ್, ರುಂಗ್ಟಾ ಗ್ರೂಪ್, ರಶ್ಮಿ ಗ್ರೂಪ್, ಅಂಬುಜಾ, ಶ್ಯಾಮ್ ಸ್ಟೀಲ್, ಐಎಫ್ ಬಿ ಗ್ರೂಪ್, ರಿಪ್ಲೇ, ಶ್ರೀ ಸಿಮೆಂಟ್, ಧುನ್ಸೇರಿ ಗ್ರೂಪ್, ಉತ್ಕರ್ಷ್ ಗ್ರೂಪ್, ಸ್ಟಾರ್ ಸಿಮೆಂಟ್, ಡಬ್ಲ್ಯುಪಿಐಎಲ್, ತೇಗಾ ಇಂಡಸ್ಟ್ರೀಸ್, ಅಕ್ರೋಪೊಲೀಸ್ ಮೈಂಟನೆನ್ಸ್, ಎಸ್ ಕೆಪಿ ಮರ್ಚೆಂಟ್ಸ್ ಮತ್ತು ಆಸ್ಟಿನ್ ಪ್ಲೈವುಡ್ಸ್ ದೇಣಿಗೆ ನೀಡಿದ ಪ್ರಮುಖ ಕಂಪನಿಗಳು.
ಬಂಗಾಳದಿಂದ ಅತಿಹೆಚ್ಚು ದೇಣಿಗೆ ನೀಡಿದ ಕಂಪನಿಯೆಂದರೆ ಕೆವೆಂಟರ್ ಗ್ರೂಪ್. ಈ ಸಮೂಹ ಸುಮಾರು ೬೦೦ ಕೋಟಿ ರೂಪಾಯಿಗಳ ದೇಣಿಗೆ ನೀಡಿದೆ. ಸಮೂಹದ ಮದನ್ಲಾಲ್ ಲಿಮಿಟೆಡ್, ಎಂಕೆಜೆ ಎಂಟರ್ಪ್ರೈಸಸ್ ಮತ್ತು ಕೆವೆಂಟರ್ ಫುಡ್ಪಾರ್ಕ್ ದೇಣಿಗೆ ನೀಡಿವೆ. ನಂತರದ ಸ್ತಾನದಲ್ಲಿ ಆರ್.ಪಿ.ಸಂಜಯ್ ಗೋಯಂಕಾ ಗ್ರೂಪ್ ಇದ್ದು, ಸುಮಾರು ೫೦೦ ಕೋಟಿ ರೂಪಾಯಿ ದೇಣಿಗೆಯನ್ನು ಹಲ್ದಿಯಾ ಎನರ್ಜಿ, ಧರಿವಾಲ್ ಇನ್ಫ್ರಾಸ್ಟ್ರಕ್ಚರ್ ಮತ್ತು ಫಿಲಿಪ್ಸ್ ಕಾರ್ಬನ್ ಬ್ಲಾಕ್ ಮೂಲಕ ನೀಡಿದೆ.
೨೦೨೩-೨೪ನೇ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಈ ಕಂಪನಿ ೪೦ ಕೋಟಿ ರೂಪಾಯಿಗಳನ್ನು ಚುನಾವಣಾ ಬಾಂಡ್ ಮೂಲಕ ಪಾವತಿಸಿದ್ದಾಗಿ ಪ್ರಕಟಿಸಿದೆ. ಇದು ಕಂಪನಿ ಈ ಅವಧಿಯಲ್ಲಿ ಗಳಿಸಿದ ಒಟ್ಟು ಲಾಭವಾದ ೧೩.೯ ಕೋಟಿ ರೂಪಾಯಿಯ ಮೂರು ಪಟ್ಟು ಅಧಿಕ.