Tuesday, April 22, 2025
Google search engine

HomeUncategorizedರಾಷ್ಟ್ರೀಯದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್’ಗೆ ಜಾಮೀನು

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್’ಗೆ ಜಾಮೀನು

ದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​​​ ಅವರಿಗೆ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯ ಇಂದು (ಮಾ.16) ಜಾಮೀನು ಮಂಜೂರು ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅರವಿಂದ್​​​ ಕೇಜ್ರಿವಾಲ್​​​ ಅವರಿಗೆ ಇಡಿ 11 ಬಾರಿ ಸಮನ್ಸ್​​​ ನೀಡಿತ್ತು. ಆದರೆ ಯಾವುದಕ್ಕೂ ಉತ್ತರ ನೀಡದ ಕೇಜ್ರಿವಾಲ್​​​ ವಿರುದ್ಧ ಇಡಿ ರೂಸ್ ಅವೆನ್ಯೂ ನ್ಯಾಯಾಲಯದ ಮೊರೆ ಹೋಗಿತ್ತು. ಹಾಗಾಗಿ ಕೋರ್ಟ್​​ ಕೇಜ್ರಿವಾಲ್​​ ಅವರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್​​ ಹಾಜರಾಗುವಂತೆ ಆದೇಶ ನೀಡತ್ತು. ಈ ಹಿನ್ನಲೆಯಲ್ಲಿ ಕೇಜ್ರಿವಾಲ್​​​​ ಇಂದು ಕೋರ್ಟ್​​ ಗೆ ಹಾಜರಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್​​​ ಅವರಿಗೆ ವಿಚಾರಣೆ ನಡೆಸಿ ಜಾಮೀನು ನೀಡಿದೆ. ಈ ಹಿಂದೆ ಕೇಜ್ರಿವಾಲ್ ಅವರು ಜಾಮೀನು ಅರ್ಜಿಯನ್ನು ಸಲ್ಲಿಸಿದರು. ಮಾರ್ಚ್ 16 ರಂದು ತನ್ನ ಮುಂದೆ ಹಾಜರಾಗುವಂತೆ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದಿವ್ಯಾ ಮಲ್ಹೋತ್ರಾ ನೀಡಿದ್ದ ಆದೇಶದ ವಿರುದ್ಧ ಅರವಿಂದ್ ಕೇಜ್ರಿವಾಲ್ ರೂಸ್ ಅವೆನ್ಯೂ ಕೋರ್ಟ್‌ ಗೆ ಅರ್ಜಿ ಸಲ್ಲಿಸಿದ್ದರು.

ದೆಹಲಿ ಮದ್ಯದ ಅಬಕಾರಿ ನೀತಿಯಲ್ಲಿ ಅಕ್ರಮ ಹಣ ವರ್ಗಾವಣೆ ನಡೆಸಿದ್ದಾರೆ ಎಂದು ಸಮನ್ಸ್‌ ನೀಡಲಾಗಿತ್ತು. ಈ ಸಮನ್ಸ್​​​​ಗೆ ಕೇಜ್ರಿವಾಲ್ ಅವರು ಅವಿಧೇಯರಾಗಿದ್ದರು. ಈ ಕಾರಣಕ್ಕೆ ಅವರ ವಿರುದ್ಧ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಎರಡು ದೂರುಗಳನ್ನು ಸಲ್ಲಿಸಲಾಗಿತ್ತು. ಆದರೆ ಕೇಜ್ರಿವಾಲ್​​​ ಅವರು ಯಾವುದೇ ಅಸಹಕಾರ ತೋರಿಲ್ಲ ಎಂದು ಅವರು ಪರ ವಕೀಲ ರಮೇಶ್ ಗುಪ್ತಾ ಅವರು ಕೋರ್ಟ್​​ ಮುಂದೆ ಹೇಳಿದ್ದಾರೆ.

ಈ ಹಿಂದೆ ನಡೆದ ವಿಚಾರಣೆಯಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರಾಕೇಶ್ ಸೈಲ್ ಅವರು ಕೇಜ್ರಿವಾಲ್ ಮತ್ತು ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸುವ ವಕೀಲರ ವಾದವನ್ನು ಆಲಿಸಿ, ಫೆಬ್ರವರಿ 17ರಂದು ವೀಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಲು ಅನುಮತಿ ನೀಡಿದರು. ಆದರೆ ಮಾ.16ಕ್ಕೆ ಕೋರ್ಟ್​​ಗೆ ದೈಹಿಕವಾಗಿ ಹಾಜರಾಗಬೇಕು ಎಂದು ಹೇಳಿದರು.

RELATED ARTICLES
- Advertisment -
Google search engine

Most Popular