Monday, April 21, 2025
Google search engine

Homeಅಪರಾಧಮೆಟ್ರೋ ಅಧಿಕಾರಿಯಿಂದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ:  ಎಫ್ ಐಆರ್ ದಾಖಲು

ಮೆಟ್ರೋ ಅಧಿಕಾರಿಯಿಂದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ:  ಎಫ್ ಐಆರ್ ದಾಖಲು

ಬೆಂಗಳೂರು: ಮಹಿಳಾ ಭದ್ರತಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರೋ ಬಗ್ಗೆ ರಾಜಾಜಿನಗರದ ಮೆಟ್ರೋ ನಿಲ್ದಾಣದ ಅಸಿಸ್ಟೆಂಟ್ ಸೆಕ್ಷನ್ ಆಫೀಸರ್  ಗಜೇಂದ್ರ.ಪಿ ಅವರ ಮೇಲೆ ಸುಬ್ರಮ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಹಿಳಾ ಸಿಬ್ಬಂದಿಗಳಿಗೆ ಅಶ್ಲೀಲ ಪದಗಳಿಂದ ನಿಂದಿಸೋದಲ್ಲದೆ, ಮೈಕೈ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ಸಹಕರಿಸದ ಮಹಿಳೆಯರಿಗೆ ಬೇರೆ ಕಡೆ ವರ್ಗಾವಣೆ ಮಾಡುವುದಾಗಿ ಬೆದರಿಕೆ‌ ಹಾಕಿದ್ದಾರೆ ಎಂಬ ಆರೋಪ ಕೂಡ ಗಜೇಂದ್ರ ವಿರುದ್ಧ ಕೇಳಿ ಬಂದಿದೆ.

ಸೆಕ್ಯೂರಿಟಿ ಏಜೆನ್ಸಿ ಮಾಲೀಕನಿಂದಲೂ ಸಹಕರಿಸುವಂತೆ ಒತ್ತಾಯ ಮಾಡಿದ ಆರೋಪ ಕೇಳಿ ಬಂದಿದೆ. ಸಹಕರಿಸಿ ಇಲ್ಲ ಕೆಲಸದಿಂದ ತೆಗೆಯುತ್ತೇನೆ ಅಂತಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಹಿಳಾ ಸಿಬ್ಬಂದಿ ಬಿಎಂಆರ್​ಸಿಎಲ್ ಹಿರಿಯ ಅಧಿಕಾರಿಗಳಿಗೂ ದೂರು ನೀಡಿದ್ದಾರೆ.

ದೂರಿನಲ್ಲಿ ಏನಿದೆ?

ರಾಜಾಜಿನಗರದ ಮೆಟ್ರೋ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡ್ತಿರುವ ಮಹಿಳಾ ಸಿಬ್ಬಂದಿಗೆ ನಿಲ್ದಾಣದ ಎಎಸ್ಓ ಗಜೇಂದ್ರ.ಪಿ ನಿಂದಿಸಿದ್ದಾರೆ.  ಒತ್ತಾಯ ಪೂರ್ವಕವಾಗಿ ಮೈಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ. ವಿರೋಧ ವ್ಯಕ್ತಪಡಿಸಿದ್ರೆ ಸುಳ್ಳು ಕೇಸ್ ಹಾಕಿ ವರ್ಗಾವಣೆ ಮಾಡ್ತೀವಿ ಅಂತ ಬೆದರಿಸ್ತಾರೆ. ನಮ್ಮ ಏಜೆನ್ಸಿ ಮಾಲೀಕರಿಗೆ ದೂರು ನೀಡಿದ್ರೆ ಸಹಕರಿಸಿ, ಇಲ್ಲ ಕೆಲಸ ಬಿಡಿ ಅಂತಾರೇ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

RELATED ARTICLES
- Advertisment -
Google search engine

Most Popular