ಮೈಸೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಮೈಸೂರಿನ ಹಲೋಮೈಸೂರು ದಿನಪತ್ರಿಕೆಯ ಸಂಪಾದಕರಾದ ಟಿ.ಗುರುರಾಜ್ ರವರನ್ನ ಶನಿವಾರ ರಾಜ್ಯಸರ್ಕಾರ ನೇಮಕ ಮಾಡಿ ಆದೇಶವನ್ನು ಹೊರಡಿಸಿದೆ.

ಕನ್ನಡ ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಪ್ರಾಧಿಕಾರಕ್ಕೆ ಮೈಸೂರು ವಿಭಾಗದಿಂದ ಇವರನ್ನು ನೇಮಕ ಮಾಡಲಾಗಿರುತ್ತದೆ.
ಇವರ ಆಯ್ಕೆಗೆ ಮೈಸೂರಿನ ಜನತೆ ಶುಭಾಶಯ ಕೋರಿರುತ್ತಾರೆ.