ವರದಿ:ಎಡತೊರೆ ಮಹೇಶ್
ಎಚ್.ಡಿ.ಕೋಟೆ: ನ್ಯಾಯಾಲಯದ ಮೊರೆಯಲ್ಲಿ ಜೀವನಂಶಕ್ಕಾಗಿ ಅರ್ಜಿ ಸಲ್ಲಿಸಿದ್ದ ಎರಡು ಜೋಡಿಗಳು ನ್ಯಾಯಾಧೀಶರು ಮತ್ತು ವಕೀಲರ ಮಧ್ಯಸ್ಥಿಕೆಯಲ್ಲಿ ಒಂದುಗೂಡಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆದ ಲೋಕ ಅದಾಲತ್ ನಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ಸತೀಶ್ ಮತ್ತು ವಕೀಲರ ಸಮ್ಮುಖದಲ್ಲಿ ಒಬ್ಬರಿಗೊಬ್ಬರು ಹಾರ ಬದಲಿಸುವ ಮೂಲಕ ಪುನಹ ಜೊತೆಗೂಡಿದರು.
ತಾಲ್ಲೂಕಿನ ಬಾಚೇಗೌಡನಹಳ್ಳಿ ಗ್ರಾಮದ ಮಹದೇವಮ್ಮ ಮತ್ತು ಮಹಾದೇವ ನಾಯಕ ಹಾಗೂ ಹಿರೇಹಳ್ಳಿ ಗ್ರಾಮದ ಎಚ್. ಎಲ್. ಶಿವಪ್ಪ ಮತ್ತು ಛಾಯಾದೇವಿ ದಂಪತಿಗಳು ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಎಲ್ಲರೂ ಸುಮಾರು ಹತ್ತು ವರ್ಷಗಳಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಜೀವನಾಂಶ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು.ಎರಡು ಜೋಡಿಗಳು ಪುನಃ ಒಂದಾಗಿ ಮಕ್ಕಳೊಂದಿಗೆ ಅನನ್ಯ ಜೀವನ ನಡೆಸುವುದಾಗಿ ಮಾಲಾರ್ಪಣೆ ಮಾಡಿಕೊಂಡು ಕುಟುಂಬದೊಂದಿಗೆ ತಮ್ಮ ಮನೆಗಳಿಗೆ ತೆರಳಿದರು.
ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಕೆ.ಜಿ. ಸತೀಶ, ಸರ್ಕಾರಿ ವಕೀಲ ಮಹಾದೇವ, ಹಿರಿಯ ವಕೀಲರಾದ ಜಿ.ಎನ್. ನಾರಾಯಣಗೌಡ, ಎ.ಟಿ. ಕೃಷ್ಣ, ಎಸ್. ಕರಿಗೌಡ, ಪ್ರವೀಣ್ ಮಾದೇವಸ್ವಾಮಿ ಸರಸ್ವತಿ ಪೊಲೀಸ್ ಪ್ರಕಾಶ್ ನ್ಯಾಯಾಲಯದ ಸಿಬ್ಬಂದಿ ಕವಿತಾ ಹಿರಿಯ ಮತ್ತು ಕಿರಿಯ ವಕೀಲರು ಇದ್ದರು.
