ಮಂಗಳೂರು(ದಕ್ಷಿಣ ಕನ್ನಡ): ಅಸ್ತಿತ್ವ ಸಹಯೋಗದೊಂದಿಗೆ ನಾಡಿನ ವಿವಿಧ ಕಡೆಗಳಿಂದ ಆಗಮಿಸುವ ನಾಟಕ, ಸಂಗೀತ, ಸಿನೆಮಾ, ಸಾಹಿತ್ಯ ಕ್ಷೇತ್ರಗಳ ಸಾಧಕರು ಮತ್ತು ಕಲಾವಿದರ ಸಮ್ಮಿಲನದೊಂದಿಗೆ ನೇಹದ ನೇಯ್ದೆ, ನಿರ್ದಿಗಂತ ರಂಗೋತ್ಸವ ಮಾ.20ರಿಂದ 25ರವರೆಗೆ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಎಲ್ ಸಿಆರ್ ಐ ಸಭಾಂಗಣದಲ್ಲಿ ನಡೆಯಲಿದೆ.
ಮಂಗಳೂರು ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಖ್ಯಾತ ಚಲನಚಿತ್ರ ನಟ ಪ್ರಕಾಶ್ ರಾಜ್ ಮಾಹಿತಿ ನೀಡಿದರು.
ಖ್ಯಾತ ನಟ, ನಿರ್ದೇಶಕ ರಂಗಭೂಮಿ ಕಲಾವಿದ ನಾನಾ ಪಾಟೇಕರ್ ಮಾ.20ರಂದು ಸಂಜೆ 5:30ಕ್ಕೆ ‘ರಂಗೋತ್ಸವ’ಕ್ಕೆ ಚಾಲನೆ ನೀಡಲಿದ್ದಾರೆ.
ಅದೇ ದಿನ ರಾತ್ರಿ 7 ಗಂಟೆಗೆ ‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’ ಪ್ರಥಮ ದಿನದ ನಾಟಕ ಪ್ರದರ್ಶನ ಸಮಾರಂಭದ ವೇದಿಕೆಯಲ್ಲಿ ನಡೆಯಲಿದೆ.