Monday, April 21, 2025
Google search engine

Homeಅಪರಾಧಬೈಕ್-ಕ್ಯಾಂಟರ್ ಡಿಕ್ಕಿ:ಅರ್ಚಕ ಸಾವು

ಬೈಕ್-ಕ್ಯಾಂಟರ್ ಡಿಕ್ಕಿ:ಅರ್ಚಕ ಸಾವು

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಬೈಕ್ ಮತ್ತು ಕ್ಯಾಂಟರ್ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಅರ್ಚಕರೊಬ್ಬರು ಮೃತಪಟ್ಟಿರುವ ಘಟನೆ ಸಾಲಿಗ್ರಾಮ ತಾಲೂಕಿನ ಜವರೇಗೌಡನ ಕೊಪ್ಪಲು ಗ್ರಾಮದ ಕ್ರಾಸ್ ಬಳಿ ಮಂಗಳವಾರ ನಡೆದಿದೆ.
ಘಟನೆಯಲ್ಲಿ ಮಾಯಿಗೌಡನಹಳ್ಳಿ ಗ್ರಾಮದ ಬಸವೇಶ್ವರ ದೇವಾಲಯದ ಅರ್ಚಕರಾದ ರಾಜು( 55 ) ಎಂಬುವರೇ ಮೃತ ಪಟ್ಟವರಾಗಿದ್ದಾರೆ ಮೃತರಿಗೆ ಮೂವರು ಹೆಣ್ಣು ಮಕ್ಕಳು ಮತ್ತು ಪತ್ನಿ ಇದ್ಧಾರೆ.
ರಾಜು ಅವರು ಹೊಸೂರಿನಿಂದ ಮಾಯಿಗೌಡನಕ್ಕೆ ಟಿವಿಎಸ್ ಎಕ್ಸ್ ಎಲ್ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಕೆ.ಆರ್.ನಗರದ ಕಡೆ ತೆರಳುತ್ತಿದ್ದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮವಾಗಿ ಅರ್ಚಕ ರಾಜು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಸಾಲಿಗ್ರಾಮ ಠಾಣೆಯ ಪಿ.ಎಸ್.ಐ.ರಂಗಸ್ವಾಮಿ ಚುಂಚನಕಟ್ಟೆ ಉಪ ಠಾಣೆಯ ಮುಖ್ಯ ಪೇದೆ ದೊರೆಸ್ವಾಮಿ, ಎಸ್.ಬಿ.ಸಿಬ್ಬಂದಿ ಚೇತನ್ ಬೇಟಿ ನೀಡಿ ಪರಿಶೀಲನೆ ನಡೆಸಿ ಕ್ಯಾಟರ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಕೆ.ಆರ್.ನಗರ ಸಾರ್ವ ಜನಿಕ ಆಸ್ವತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಈ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular