Monday, April 21, 2025
Google search engine

HomeUncategorizedಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದರೂ ಸ್ಪರ್ಧಿಸಲ್ಲ: ಜೆಸಿ ಮಾಧುಸ್ವಾಮಿ

ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದರೂ ಸ್ಪರ್ಧಿಸಲ್ಲ: ಜೆಸಿ ಮಾಧುಸ್ವಾಮಿ

ತುಮಕೂರು: ತನಗೆ ಟಿಕೆಟ್ ನೀಡದಂಥ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದ್ದರೆ ಅದು ತನಗೆ ಬೇಡವೇ ಬೇಡ, ತಮ್ಮನ್ನು ಜೊತೆಯಲ್ಲಿ ಕರೆದೊಯ್ಯುವ ನಿರೀಕ್ಷೆ ಸುಳ್ಳಾಗಿದೆ. ತಾನೀಗ ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದರೂ ಸ್ಪರ್ಧಿಸಲ್ಲ ಎಂದು ಮಾಜಿ ಸಚಿವ ಜೆ ಸಿ ಮಾಧುಸ್ವಾಮಿ ತಿಳಿಸಿದ್ದಾರೆ.

ರಾಜ್ಯ ಬಿಜೆಪಿಯ ಹಲವಾರು ನಾಯಕರಲ್ಲಿ ಬಂಡಾಯ ಪ್ರವೃತ್ತಿ ತಲೆದೋರಿದೆ.ತುಮಕೂರು ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು ಆದರೆ, ಯಡಿಯೂರಪ್ಪ ಅದನ್ನು ವಿ ಸೋಮಣ್ಣಗೆ  ಕೊಡಿಸಿದರು.   

ತಮ್ಮ ಕಚೇರಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು,  ಸೋಮಣ್ಣರನ್ನು ಸರಿಸಿ ತನಗೆ ಟಿಕೆಟ್ ನೀಡುವುದೂ ಬೇಕಿಲ್ಲ, ಸ್ಪರ್ಧೆ ಮಾಡುವ ಆಸೆ ಬತ್ತಿ ಹೋಗಿದೆ, ಆದರೆ ವಿಷಾದವೆಂದರೆ ಪಕ್ಷವನ್ನು ಆರೋಗ್ಯಕರವಾಗಿ ಮುನ್ನಡೆಸುವ ಬಗ್ಗೆ ಯಾರಿಗೂ ಯೋಚನೆ ಇದ್ದಂತಿಲ್ಲ ಎಂದು ಮಾಧುಸ್ವಾಮಿ ಹೇಳಿದರು.

ತಮ್ಮ ಮುಂದಿನ ನಿರ್ಧಾರದ ಬಗ್ಗೆ ಮಾತಾಡಿದ ಅವರು ಈಗಾಗಲೇ ಎರಡು ಗುಂಪುಗಳ ಜೊತೆ ಮಾತಾಡಿದ್ದೇನೆ, ಯಾರ ಮೇಲೂ ಭಾವನೆಗಳನ್ನು ಹೇರಲ್ಲ, ಒಂದು ತೀರ್ಮಾನಕ್ಕೆ ಬಂದ ಬಳಿಕ ಅದನ್ನು ಮಾಧ್ಯಮದವರಿಗೆ ತಿಳಿಸುವುದಾಗಿ ಮಾಧುಸ್ವಾಮಿ ಹೇಳಿದರು.

RELATED ARTICLES
- Advertisment -
Google search engine

Most Popular