ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಚ್.ಜೆ.ರಮೇಶ್ ಮತ್ತು ಉಪಾಧ್ಯಕ್ಷರಾಗಿ ನಾಗರಾಜು ಅವರು ಅವಿರೋಧವಾಗಿ ಆಯ್ಕೆಯಾದರು.
ಬುಧವಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಜೆ.ರಮೇಶ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಾಗರಾಜು ಅವರನ್ನು ಹೊರತು ಪಡಿಸಿ ಬೇರೆಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು.
ಹಾಲಿ ಅಧ್ಯಕ್ಷರಾಗಿದ್ದ ಲಲಿತಮ್ಮ ಮತ್ತು ಉಪಾಧ್ಯಕ್ಷೆ ಭಾರತಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಈ ಚುನಾವಣೆ ನಡೆಯಿತು.ಹುಣಸೂರು ಸಹಕಾರ ಇಲಾಖೆಯ ಅಧಿಕಾರಿ ಗಿರೀಶ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.ಚುನಾವಣಾ ಸಭೆಯಲ್ಲಿ ನಿರ್ದೇಶಕರಾದ ಲಲಿತಮ್ಮ,ಪುರ್ಣಿಮಾ,ಭಾರತಿ,ಬುದ್ದಿಸಾಗರ, ಸ್ವಾಮಿ,ಪ್ರಶನ್ನ,ರಂಗೇಗೌಡ,ಪರುಶುರಾಮ್,ಯಧುಕುಮಾರ್,ಅಕ್ಕಯಮ್ಮ ಸಂಘದ ಕಾರ್ಯದರ್ಶಿ ಶಂಕರ್ ಹಾಲು ಪರೀಕ್ಷ ಎಚ್.ಎಲ್.ಮಹದೇವ್, ಇದ್ದರು.
ನಂತರ ಮಾತನಾಡಿದ ನೂತನ ಅಧ್ಯಕ್ಷ ಎಚ್.ಜೆ.ರಮೇಶ್ ಶಾಸಕ ಡಿ.ರವಿಶಂಕರ್ ಸಹಕಾರದ ಮೂಲಕ ಸಂಘದ ನೂತನ ಕಟ್ಟಡ ನಿರ್ಮಾಣ ಮಾಡಲು ಶ್ರಮಿಸುವುದರ ಜತಗೆ ಜಿಲ್ಲಾ ಒಕ್ಕೂಟದ ದಿಂದ ರೈತರಿಗೆ ಸಿಗುವ ಸವಲತ್ತುಗಳನ್ನು ಒದಗಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ನೂತನ ಅಧ್ಯಕ್ಷ -ಉಪಾಧ್ಯಕ್ಷರನ್ನು ಹಳಿಯೂರು ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಮಂಜುನಾಥ್, ಕಾಲೇಜು ಮಂಡಳಿ ಉಪಾಧ್ಯಕ್ಷ ಎಚ್.ಎಸ್.ಶ್ರೀನಿವಾಸ್, ಎಪಿಎಂಸಿ ಮಾಜಿ ನಿರ್ದೇಶಕ ಕೆ.ಮಹದೇವ್, ಸಹಕಾರ ಸಂಘದ ನಿರ್ದೇಶಕ ಎಚ್.ಎನ್.ರಮೇಶ್, ಮುಖಂಡರಾದ ಎಚ್.ಎಸ್.ರವಿ, ಹಳಿಯೂರು ಪ್ರಭಾಕರ್, ವಕೀಲ ಪಣಿ,ಎಚ್.ಎಸ್. ಜಗದೀಶ್ ,ಎಚ್.ಎಚ್.ಹರೀಶ್, ಚಿಕ್ಕಕೊಪ್ಪಲು ಗಿರೀಶ್,ನವೀನ್ ಮುನ್ನಾ,ಆರ್.ಆರ್.ಎಸ್.ಚಂದ್ರೇಗೌಡ,ಸೋಮ,ಐ.ಪಿ.ವೆಂಕಟೇಶ್,ದಿಡ್ಡಹಳ್ಳಿ ಪಾಲಾಕ್ಷ ಮತ್ತಿತರರು ಅಭಿನಂದಿಸಿದರು.