Friday, March 20, 2026
Google search engine

Homeಸ್ಥಳೀಯಮಾ.31ರಂದು ಕರ್ನಾಟಕ ಫ್ಯಾಷನ್ ಶೋ

ಮಾ.31ರಂದು ಕರ್ನಾಟಕ ಫ್ಯಾಷನ್ ಶೋ

ಮೈಸೂರು: ಚಾಮರಾಜ ಮೊಹಲ್ಲಾ ನಾರಾಯಣಶಾಸ್ತ್ರಿ ರಸ್ತೆಯಲ್ಲಿನ ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ ವತಿಯಿಂದ ಮಾ.೩೧ರಂದು ಮಧ್ಯಾಹ್ನ ೩ ಗಂಟೆಯಿಂದ ರಾತ್ರಿ ೯ರವರೆಗೆ ನಗರದ ಪುರಭವನದಲ್ಲಿ ಕರ್ನಾಟಕ ಫ್ಯಾಷನ್ ಶೋ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ನಗರಾಧ್ಯಕ್ಷೆ ಮೌಲ್ಯ ಜೈಕುಮಾರ್ ತಿಳಿಸಿದರು.

ಫ್ಯಾಷನ್ ಶೋನಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಭಾವಚಿತ್ರವಿರುವ ನೆನಪಿನ ಕಾಣಿಕೆ, ಪ್ರಮಾಣಪತ್ರ, ಮೈಸೂರು ಪೇಟ, ಹಾರ, ಶಾಲು ನೀಡಿ ಗೌರವಿಸಲಾಗುವುದು. ವೀಕ್ಷಣೆಗೆ ಉಚಿತ ಪ್ರವೇಶವಿದೆ. ಜತೆಗೆ ಮಜಾ ಭಾರತ ಹಾಗೂ ಗಿಚ್ಚಿ ಗಿಲಿಗಿಲಿ ತಂಡದವರಿಂದ ಹಾಸ್ಯ ಕಾರ್ಯಕ್ರಮವಿದೆ ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular