Saturday, April 19, 2025
Google search engine

Homeರಾಜ್ಯಸುದ್ದಿಜಾಲಮಂಡ್ಯ: ಲೋಕಶಕ್ತಿ ಪಕ್ಷದಿಂದ ಎನ್.ಬಸವರಾಜು ಸ್ಪರ್ಧೆ

ಮಂಡ್ಯ: ಲೋಕಶಕ್ತಿ ಪಕ್ಷದಿಂದ ಎನ್.ಬಸವರಾಜು ಸ್ಪರ್ಧೆ

ಮಂಡ್ಯ : ಮಂಡ್ಯ ಲೋಕಸಭಾ ಚುನಾವಣೆಗೆ ಲೋಕಶಕ್ತಿ ಪಕ್ಷದಿಂದ ಉದ್ಯಮಿ ಎನ್.ಬಸವರಾಜು ಅವರು ಸ್ಪರ್ಧೆ ಮಾಡುತ್ತಿದ್ದಾರೆ.
ಹಿಂದುಳಿದ ವರ್ಗಗಳ ವೇದಿಕೆ ರಾಜ್ಯಾಧ್ಯಕ್ಷರೂ ಆದ ಬಸವರಾಜು, ಇತ್ತೀಚೆಗೆ ಲೋಕಶಕ್ತಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಬಸವರಾಜು ಅವರ ಸಂಘಟನೆಯನ್ನು ಗುರುತಿಸಿ ಪಕ್ಷದ ಅಧ್ಯಕ್ಷರಾದ ಚಂದ್ರಶೇಖರ ವಿ.ಸ್ಥಾವರಮಠ್ ಅವರು ಬಸವರಾಜು ಅವರಿಗೆ ತಮ್ಮ ಪಕ್ಷದ ಹಿಂದುಳಿದ ವರ್ಗಗಳ ಘಟಕದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು.

ಇದೀಗ ಅವರಿಗೆ ಮಂಡ್ಯ ಲೋಕಸಭಾ ಟಿಕೆಟ್ ಘೋಷಣೆ ಮಾಡಲಾಗಿದೆ. ೫೫ ವರ್ಷ ಪ್ರಾಯದ ಎನ್.ಬಸವರಾಜು ಮಂಡ್ಯ ನಗರದ ವಾಸಿಯಾಗಿದ್ದಾರೆ. ಸತತವಾಗಿ ಮೂರು ಬಾರಿ ಗ್ರಾಮ ಪಂಚಾಯ್ತಿಸದಸ್ಯರಾಗಿ ಗೆಲುವು ಸಾಧಿಸಿ ಹ್ಯಾಟ್ರಿಕ್ ಬಸವರಾಜು ಎಂದೇ ಪ್ರಸಿದ್ಧಿ ಹೊಂದಿದ್ದಾರೆ. ಒಮ್ಮೆ ಜಿಲ್ಲಾ ಪಂಚಾಯ್ತಿಗೆ ಮತ್ತೊಮ್ಮೆ ವಿಧಾನಸಭೆಗೆ ಸ್ಪಧಿಸಿ ಪರಾಭವಗೊಂಡು ರಾಜ್ಯವ್ಯಾಪಿ ಅಹಿಂದ ಸಮುದಾಯವನ್ನು ಸಂಘಟಿಸಿ ಅಹಿಂದ ವರ್ಗಗಳ ವೇದಿಕೆಯ ಸಂಘಟನೆಯನ್ನು ಹುಟ್ಟುಹಾಕಿದ್ದಾರೆ. ರಾಜ್ಯಾದ್ಯಂತ ಇವರ ಲಕ್ಷಾಂತರ ಅಭಿಮಾನಿಗಳು ಇದ್ದಾರೆ.

RELATED ARTICLES
- Advertisment -
Google search engine

Most Popular