Saturday, April 19, 2025
Google search engine

Homeರಾಜ್ಯಸುದ್ದಿಜಾಲಹರಾಜು ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ಹಗರಣ:ಗಂಭೀರ ಆರೋಪ

ಹರಾಜು ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ಹಗರಣ:ಗಂಭೀರ ಆರೋಪ

ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಪಟ್ಟಣದ ಪುರಸಭೆಯ ವಾಣಿಜ್ಯ ಮಳಿಗೆಗಳ ಬಾಡಿಗೆ ಹರಾಜು ಪ್ರಕ್ರಿಯೆಯಲ್ಲಿ ಬಾರಿ ಭ್ರಷ್ಟಾಚಾರದ ಹಗರಣ ನಡೆದಿದ್ದು ಲೋಕಾಯುಕ್ತರಿಂದ ತನಿಖೆ ಆಗಬೇಕು ಎಂದು ವಾಣಿಜ್ಯ ಮಳಿಗೆಳ ಬಿಡ್ ದಾರರಾದ ಪಟ್ಟಣದ ರುದ್ರೇಶ್ ಮತ್ತು ನೇಮತ್ ಉಲ್ಲಾಖಾನ್, ಅಲಿಂ, ವಿಕಲಚೇತನ ವಿನೋದ್, ಹಂಪಾಪುರ ಸೂರಿ ಜಂಟಿಯಾಗಿ ಆರೋಪ ಮಾಡಿದರು. ಶುಕ್ರವಾರ ಕೆ.ಆರ್.ನಗರ ಪತ್ರಕರ್ತರ ಭವನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ವಾಣಿಜ್ಯ ಮಳಿಗೆಗಳ ಹರಾಜು ವಿಚಾರವಾಗಿ ಶಾಸಕ ಡಿ ರವಿಶಂಕ‌ರ್ ಅವರು ಮೌನವಾಗಿರುವುದು ಏಕೆ ಇದರ ಬಗ್ಗೆ ಸರಿಯಾದ ಮಾಹಿತಿಯನ್ನು ಜನರಿಗೆ ಹೇಳದಿದ್ದರೆ ಜನ ತಪ್ಪಾಗಿ ತಿಳಿದುಕೊಳ್ಳುತ್ತಿದ್ದಾರೆ, ನಿಮ್ಮ ತಂದೆ ದೊಡ್ಡಸ್ವಾಮೇಗೌಡರಿಗೆ ಹಾಲಿ ಇರುವ ಮಳಿಗೆಗಳ ಬಾಡಿಗೆದಾರರು ಹಣ ನೀಡಿದ್ದಾರೆ ಎಂದೆಲ್ಲ ಸುದ್ದಿ ಪಟ್ಟಣದಲ್ಲಿ ಹರಿದಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಪಟ್ಟಣದ ವಾಣಿಜ್ಯ ಮಳಿಗೆಗಳನ್ನು ಕಳೆದ 29/02/2024 ರಂದು 2 ಹೊಸ ಮಳಿಗೆಗಳು ಸೇರಿದಂತೆ 72 ಹಳೆಯ ಮಳಿಗೆಗಳು ಒಟ್ಟು 74 ಮಳಿಗೆಗಳು ಅನ್ ಲೈನ್ ಮೂಲಕ ಬಿಡ್ ಆಗಿದ್ದು ಇದರಲ್ಲಿ ಯಶಸ್ವಿ ಬಿಡುದಾರರಿಗೆ 6 ದಿನಗಳಲ್ಲಿ ಮಳಿಗೆಗಳನ್ನು ಕಾನೂನಿನಡಿಯಲ್ಲಿ ನೀಡಬೇಕಾಗಿದ್ದರು ಇದೂವರೆವಿಗೂ ಬಿಡ್ ದಾರರೊಗೆ ವಾಣಿಜ್ಯ ಮಳಿಗೆಗಳನ್ನು ನೀಡಿಲ್ಲ ಎಂದು ದೂರಿದರು.

32 ವರ್ಷಗಳಿಂದ ಮಳಿಗೆಗಳಲ್ಲಿ ಬಾಡಿಗೆಗೆ ಇರುವವರಿಗೆ ಮತ್ತೆ ಕರಾರಿನ ಮೂಲಕ ಮಳಿಗೆಗಳನ್ನು ಕೊಡುತ್ತಿರುವುದು ಎಷ್ಟು ಸರಿ ಈ ವಿಚಾರವಾಗಿ ನಾವು( ಬಿಡ್ ದಾರರು) ಎಲ್ಲಾ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತರಲಾಗಿದ್ದರು ಸಹ, ಅಲ್ಲದ ಪುರಸಭೆ ಮುಂದೆ ಹೋರಾಟ ಮಾಡಿದ್ದರೂ ಕೂಡ ಜಾಣ‌ ಕುರುಡಾಗಿರುವ ಅಧಿಕಾರಗಳ ವರ್ತನೆ ನೋಡಿದರೆ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಬಾರಿ ಭಷ್ಟಚಾರದ ಹಗರಣ ನಡೆದಿದೆ ಎಂದು ಸಾರ್ವಜನಿಕರ ಮಾತು ನಿಜವಾಗಿದೆ‌ ಎಂದು ಆರೋಪಿಸಿದರು.

ಪುರಸಭೆ ವಾಣಿಜ್ಯ 72 ಮಳಿಗೆಗಳ ಬಾಡಿಗೆಗೆ ಸಂಬಂದಿದಂತೆ ತಿಂಗಳಿಗೆ ಅಂದಾಜು 25 ರಿಂದ 30. ಲಕ್ಷ ನಷ್ಟವುಂಟಾಗಿದೆ, ಇದರ ಬಗ್ಗೆ ಯಾವೊಬ್ಬ ಪುರಸಭಾ ಸದಸ್ಯರು ಕೂಡ ಚಕಾರವೆತ್ತುತ್ತಿಲ್ಲ, ಇದರಿಂದಲೇ ಗೋತ್ತಾಗುತ್ತದೆ ಭ್ರಷ್ಟಾಚಾರ ನಡೆದಿರುವ ಬಗ್ಗೆ , ಈ ಸಂಬಂದ ಜಿಲ್ಲಾಧಿಕಾರಿಗಳು ಮತ್ತು ಪುರಸಭೆಯ ಆಡಳಿತ ಅಧಿಕಾರಿಗಳಾದ ಉಪ ವಿಭಾಗಾಧಿಕಾರಿಗಳು ಗಮನಕ್ಕೆ ತಂದರು ಪ್ರಯೋಜನವಿಲ, ಅಧಿಕಾರಿ ವರ್ಗ ಕೂಡ ಈ‌ ಹಗರಣದಲ್ಲಿ ಶಾಮೀಲು ಆಗಿದ್ದಾರೆ, ಆದ್ದರಿಂದ ಬಾಡಿಗೆಗೆ ಪಡೆದ ಬಿಡ್ ದಾರರು ಈ ಸಂಬಂದ ನ್ಯಾಯಾಲಯ ಮೇಟ್ಟಿಲೇರಿದ್ದಲ್ಲದೆ, ಲೋಕಾಯುಕ್ತರಿಗೆ ದೂರು ಕೋಡಲಾಗುವುದು ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular