ಮಂಗಳೂರು(ದಕ್ಷಿಣ ಕನ್ನಡ): ಕತರ್ ನಿಂದ ಉಮ್ರಾ ಯಾತ್ರೆ ಹೊರಟಿದ್ದ ಕಾರು ಅಪಘಾತಕ್ಕೀಡಾಗಿ ಮೃತಪಟ್ಟಿದ್ದ ಮಂಗಳೂರಿನ ಹಳೆಯಂಗಡಿಯ ಒಂದೇ ಕುಟುಂಬದ ಮೂವರ ಅಂತಿಮ ಸಂಸ್ಕಾರ ರಿಯಾದ್ ಮತ್ತು ತಾಯಿಫ್ ನಡುವಿನ ಉಮ್ಮುಲ್ ಹಮ್ಮಾಮ್ ನ ಕಿಂಗ್ ಖಾಲಿದ್ ಗ್ರ್ಯಾಂಡ್ ಮಸೀದಿಯ ದಫನ ಭೂಮಿಯಲ್ಲಿ ನಡೆಯಿತು.
ಈ ಸಂದರ್ಭ ಮೃತಪಟ್ಟಿರುವ ಹಿಬಾ ಅವರ ತಂದೆ ಮುಹಮ್ಮದ್ ಶಮೀಮ್, ಚಿಕ್ಕಪ್ಪ ಲತೀಫ್, ರಮೀಝ್ ಅವರ ತಂದೆ ತಾಯಿ ಹಾಗೂ ಕುಟುಂಬ ಸದಸ್ಯರು ಭಾಗವಹಿಸಿದ್ದರು .

ಮಾ.20ರಂದು ರಾತ್ರಿ ರಿಯಾದ್-ತಾಯಿಫ್ ಹೆದ್ದಾರಿಯಲ್ಲಿ ಸಂಭವಿಸಿದ ಈ ರಸ್ತೆ ಅಪಘಾತದಲ್ಲಿ ಮೂಲತಃ ಹಳೆಯಂಗಡಿ 10ನೇ ತೋಕೂರು ನಿವಾಸಿ ಹಿಬಾ (29), ಅವರ ಪತಿ ಮುಂಬೈ ಮೂಲದ ಮುಹಮ್ಮದ್ ರಮೀಝ್(34) ಮತ್ತು ಪುತ್ರಿ ರಾಹ (3ತಿಂಗಳು) ಮೃತಪಟ್ಟಿದ್ದಾರೆ. ಹಿಬಾ ಅವರ ಹಿರಿಯ ಪುತ್ರ 3 ವರ್ಷದ ಹಾರೂಶ್ (3) ಗಂಭೀರವಾಗಿ ಗಾಯಗೊಂಡಿದ್ದಾನೆ. ಅದೇರೀತಿ ಅವರ ಚಿಕ್ಕಪ್ಪ ಲತೀಫ್ ಅವರ ಪುತ್ರಿ ಫಾತಿಮಾ(19) ಸ್ಥಿತಿ ಕೂಡಾ ಚಿಂತಾಜನಕವಾಗಿದೆ. ಇವರಿಬ್ಬರನ್ನು ರಿಯಾದ್ ನ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.