ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಮ್ಮ ಕಾಂಗ್ರೇಸ್ ಅಭ್ಯರ್ಥಿ ಸ್ವಾರ್ ಚಂದ್ರು ಅವರನ್ನು ಅಧಿಕ ಮತಗಳನ್ನು ಗೆಲ್ಲಿಸುವ ಮೂಲಕ ಲೋಕಸಭೆಗೆ ಕಳುಹಿಸಿ ಕೋಡೋಣ, ಕಾರ್ಯಕರ್ತರು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ನನಗೆ ನೀಡಿದ ಮತವನ್ನು ಅವರಿಗೂ ನೀಡಿ ಗೆಲ್ಲಿಸಿ ಕೊಡಿ ಎಂದು ಶಾಸಕ ಡಿ.ರವಿಶಂಕರ್ ಮನವಿ ಮಾಡಿದರು.
ಕೆ.ಆರ್. ಪಟ್ಟಣದ ಕಾಂಗ್ರೇಸ್ ಕಛೇರಿಯಲ್ಲಿ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲ್ಲೂಕಿನ ಕಾಂಗ್ರೇಸ್ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಾರ್ಚ್ ೨೭ ರಂದು ಮಂಡ್ಯ ಲೋಕಸಭಾ ಚುನಾವಣೆ ಪ್ರಚಾರದ ಕಾಂಗೇಸ್ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಲು ಮಂಡ್ಯ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರಕ್ಕೆ ಆಗಮಿಸುತ್ತಿದ್ದು, ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕಿನ ಕಾಂಗ್ರೇಸ್ ಮುಖಂಡರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಚಿವರ ಕಾರ್ಯಕ್ರಮವನ್ನ ಯಶಸ್ವಿ ಮಾಡಿಕೊಡಬೇಕೆಂದು ತಿಳಿಸಿದರು.
ಕೆಪಿಸಿಸಿ ಸದಸ್ಯ ದೊಡ್ಡಸ್ವಾಮೇಗೌಡ ಮಾತನಾಡಿ ಲೋಕಸಭಾ ಚುನಾವಣೆಯನ್ನು ನಮ್ಮ ಕ್ಷೇತ್ರದ ವಿಧಾನ ಸಭಾ ಚುನಾವಣೆಯಂತೆ ನಡೆಸಲು ಕಾರ್ಯಕರ್ತರು ಸಂಘಟಿತರಾಗಿ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಪ್ರತಿ ಕುಟುಂಬಕ್ಕೆ ತಿಳಿಸುವ ಮೂಲಕ ಸರ್ಕಾರದ ಸಾಧನೆಯನ್ನ ಜನರಿಗೆ ಸರ್ಕಾರದ ಸಾಧನೆಗಳ ಬಗ್ಗೆ ಅರಿವು ಮೂಡಿಸಿ, ನಮ್ಮ ತಾಲ್ಲೂಕು ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸೇರಿರುವುದರಿಂದ ಮಂಡ್ಯ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಮುಖಂಡರ ಗಮನ ಸೆಳೆಯುವಂತೆ ಕಾರ್ಯಕರ್ತರು ಕೆಲಸ ಮಾಡಿ ಅಭ್ಯರ್ಥಿಯನ್ನ ಗೆಲ್ಲಿಸೋಣ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯ ಸ್ವಾಮಿ ಅವರ ಮಾರ್ಗದರ್ಶನದಲ್ಲಿ ಚುನಾವಣೆ ಮಾಡುವುದರ ಬಗ್ಗೆ ಸಕಷ್ಟು ಮಾಹಿತಿಗಳನ್ನು ನೀಡಲು ಆಗಮಿಸುತ್ತಿರುವುದರಿಂದ ಅವರನ್ನ ಅದ್ಧೂರಿಯಾಗಿ ಬರ ಮಾಡಿಕೊಳೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಈ ಸಭೆಯಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಂ.ಎಸ್.ಮಹದೇವ್, ನಗರ ಕಾಂಗ್ರೇಸ್ ಅಧ್ಯಕ್ಷ ಪ್ರಭಾಕರ್, ಸಿಡಿಸಿ ಉಪಾಧ್ಯಕ್ಷ ಪರೀಕ್ಷಿತ್, ತಾ.ಪಂ ಮಾಜಿ ಸದಸ್ಯ ಗೋವಿಂದೇಗೌಡ, ಪುರಸಭಾ ಸದಸ್ಯ ಶಂಕರ್, ಅರುಣ್ ರಾಜ್, ತಿಮ್ಮಶೆಟ್ಟಿ, ರಾಜಶೇಖರ್, ಹೆಬ್ಬಾಳ್ ಸೋಮಣ್ಣ, ಹಂಪಾಪುರ ದೇವರಾಜ್, ಲತಾ, ರಾಣಿ, ಅಂಕನಹಳ್ಳಿ ಬಸವಣ್ಣ, ಕ್ಯಾರೆ ನಾಗರಾಜ್, ಅರ್ಜುನಹಳ್ಳಿ ರಾಜಯ್ಯ, ಶಾಂತಿರಾಜ್, ಹೊಸ ಆಗ್ರಹಾರ ಸ್ವಾಮಿ, ಹೊಸೂರು ಡೈರಿ ಅಧ್ಯಕ್ಷ ರಮೇಶ್, ಹೊಸೂರು ಡೈರಿಮಾದು, ಗುಣಪಾಲ್ ಜೈನ್ ಸೇರಿದಂತೆ ಇನ್ನಿತರರು ಇದ್ದರು.