Saturday, April 19, 2025
Google search engine

Homeರಾಜ್ಯಜೈಲಿನಿಂದಲೇ ಕೇಜ್ರಿವಾಲ್ ಆಡಳಿತ : ಭಗವಂತ್ ಮಾನ್

ಜೈಲಿನಿಂದಲೇ ಕೇಜ್ರಿವಾಲ್ ಆಡಳಿತ : ಭಗವಂತ್ ಮಾನ್

ಹೊಸದಿಲ್ಲಿ: ಒಂದು ವೇಳೆ ಇಡಿ ಅರವಿಂದ್ ಕೇಜ್ರಿವಾಲ್ ಅವರನ್ನೇನಾದರೂ ಜೈಲಿಗೆ ಕಳಿಸಿದರೆ, ಜೈಲಿನಲ್ಲಿಯೇ ಸರಕಾರ ನಡೆಸಲು ಅನುವಾಗುವಂತೆ ಅವರಿಗೆ ಕಚೇರಿ ಸ್ಥಾಪಿಸಲು ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್‌ನ ಅನುಮತಿ ಕೇಳಲಾಗುವುದು ಎಂದು ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ತಿಳಿಸಿದ್ದಾರೆ.

ಆಮ್ ಆದ್ಮಿ ಪಕ್ಷದಲ್ಲಿ ಅರವಿಂದ್ ಕೇಜ್ರಿವಾಲ್ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ. ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ರನ್ನು ಬಂಧಿಸಿದ್ದು, ಒಂದು ವೇಳೆ ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದರೆ, ಅವರು ಸರಕಾರವನ್ನು ಹೇಗೆ ನಡೆಸಲು ಸಾಧ್ಯ ಎಂದು ಸಂದರ್ಶನದಲ್ಲಿ ಕೇಳಲಾಗಿರುವ ಪ್ರಶ್ನೆಗೆ, ಜೈಲಿನಿಂದ ಸರಕಾರ ನಡೆಸಬಾರದು ಎಂದು ಎಲ್ಲಿಯೂ ಬರೆದಿಲ್ಲ ಎಂದು ಮಾನ್ ಉತ್ತರಿಸಿದ್ದಾರೆ.

ಈ ನಡುವೆ, ಮಾರ್ಚ್ ೨೮ರವರೆಗೆ ಅರವಿಂದ್ ಕೇಜ್ರಿವಾಲ್ ಅವರನ್ನು ಈಡಿ ಕಸ್ಟಡಿಗೆ ವಹಿಸಿರುವುದರಿಂದ, ಅವರು ತಮ್ಮ ಮುಖ್ಯಮಂತ್ರಿ ಹುದ್ದೆಗೆ ರಾಜಿನಾಮೆ ಸಲ್ಲಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

RELATED ARTICLES
- Advertisment -
Google search engine

Most Popular