Thursday, July 17, 2025
Google search engine

Homeಅಪರಾಧಪತ್ನಿಯ ಕಿರುಕುಳ ತಾಳಲಾರದೆ ಗೋಡೆ ಮೇಲೆ  ಡೆತ್ ನೋಟ್ ಬರೆದು ಪತಿ ಆತ್ಮಹತ್ಯೆ

ಪತ್ನಿಯ ಕಿರುಕುಳ ತಾಳಲಾರದೆ ಗೋಡೆ ಮೇಲೆ  ಡೆತ್ ನೋಟ್ ಬರೆದು ಪತಿ ಆತ್ಮಹತ್ಯೆ

ಬೆಂಗಳೂರು: ಪತ್ನಿಯ ಕಿರುಕುಳ ತಾಳಲಾಗದೆ ಗೋಡೆ ಮೇಲೆಯೇ ಡೆತ್ ನೋಟ್ ಬರೆದು ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೈಯದ್ ಅಕ್ಮಲ್ ಅನ್ಸರ್ (34) ಆತ್ಮಹತ್ಯೆಗೆ ಶರಣಾದ ಪತಿ. ಘಟನೆ ಸಂಬಂಧ  ಪತ್ನಿಯ ಕೃತ್ಯಕ್ಕೆ ಸಾಥ್ ನೀಡಿ ಪತಿಗೆ ಕಿರುಕುಳ ಕೊಟ್ಟ ಆರೋಪದ ಮೇಲೆ ಪತ್ನಿ ಖತೀಜತುಲ್ ಕುಬ್ರಾ, ಮಾವ ಮುನಾವರ್ ಸುಬಾನ್, ಪತ್ನಿಯ ಸಂಬಂಧಿಕರಾದ ಅಖೀಬ್, ಅಬ್ದುಲ್ ರಹಮ್ಮಾನ್ ಮನ್ಸೂರ್ ಸೇರಿದಂತೆ ಏಳು ಜನರ ಮೇಲೆ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಜೆ.ಪಿ.ಮಾರ್ಗನ್ ಕಂಪನಿಯಲ್ಲಿ ಟೆಕ್ಕಿಯಾಗಿದ್ದ ಅಕ್ಮಲ್ ಅನ್ಸರ್ ಕಳೆದ ಏಳು ವರ್ಷದ ಹಿಂದೆ ಕುಬ್ರಾ ಜೊತೆಗೆ ವಿವಾಹವಾಗಿದ್ದರು. ಗೋವಿಂದಪುರ ಫ್ಲಾಟ್ ಒಂದರಲ್ಲಿ ವಾಸವಿದ್ದ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಪತ್ನಿ ಕುಬ್ರಾ ಗಂಡನ ಮೇಲೆ ಅನುಮಾನ‌ ಪಡುತ್ತಿದ್ದಳು. ಅಲ್ಲದೇ ಹೆಚ್ಚು ಹಣ ಕೊಡುವಂತೆ ಬಲವಂತ ಮಾಡ್ತಿದ್ದಳು. ಒಂದು ತಿಂಗಳ‌ ಹಿಂದೆ ಗಂಡನ ಜೊತೆ ಗಲಾಟೆ ಮಾಡಿಕೊಂಡು ಬಿಟಿಎಂ ಲೇಔಟ್ ​ನಲ್ಲಿರುವ ತಾಯಿ ಮನೆಗೆ ಕುಬ್ರಾ ಬಂದಿದ್ದಳು. ಈ ವೇಳೆ ಅಕ್ಮಲ್ ಅನ್ಸರ್ ಫ್ಲಾಟ್ ​ನಲ್ಲಿ ಒಬ್ಬಂಟಿಯಾಗಿದ್ದ. ಆದರೆ ಮಾರ್ಚ್ 12 ರಂದು ಗೋಡೆ ಮೇಲೆ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನನ್ನ ಸಾವಿಗೆ ಪತ್ನಿ ಕುಬ್ರಾ ಹಾಗೂ ಕುಟುಂಬಸ್ಥರು ಕಾರಣ. ಮುನಾವರ್ ಸುಬಾನ್, ಮನ್ಸೂರ್, ಆಖಿಬ್, ಅಜೀಮ್, ಅಬ್ದುಲ್ ರಹಮಾನ್ ನನ್ನ ಜೀವನ ಹಾಳು ಮಾಡಿದ್ರು ಎಂದು ಗೋಡೆ ಮೇಲೆ ಬರೆದು ಅಕ್ಮಲ್ ಅನ್ಸರ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಗ ಕರೆಗಳನ್ನು ಸ್ವೀಕರಿಸದಿದ್ದಾಗ ಅನುಮಾನಗೊಂಡ ತಾಯಿ ಫ್ಲಾಟ್ ​ಗೆ ಬಂದು ನೋಡಿದಾಗ ಆತ್ಮಹತ್ಯೆಯ ವಿಚಾರ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಮೃತನ ಸಹೋದರ ದೂರು ದಾಖಲಿಸಿದ್ದಾನೆ.

ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಗಂಡನ ಸಾವಿನ ಬಳಿಕ ಪತಿ ಹಾಗೂ ಮಕ್ಕಳ ಸುಳಿವಿಲ್ಲ. ಗಂಡನ ಮುಖವನ್ನೂ ನೋಡಲು ಪತ್ನಿ ಬಂದಿಲ್ಲ. ಹಾಗೂ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಮಕ್ಕಳನ್ನೂ ಬಿಡದೆ ಮಕ್ಕಳೊಂದಿಗೆ ತಾಯಿ ಎಸ್ಕೇಪ್ ಆಗಿದ್ದಾರೆ.

RELATED ARTICLES
- Advertisment -
Google search engine

Most Popular