Tuesday, April 22, 2025
Google search engine

Homeರಾಜಕೀಯಕೇಂದ್ರ ಸರ್ಕಾರ ರಾಜ್ಯಕ್ಕೆ ೨.೩೦ ಲಕ್ಷ ಸಾವಿರ ಕೋಟಿ ರೂ. ನೀಡಿದೆ: ಪ್ರಹ್ಲಾದ್ ಜೋಶಿ

ಕೇಂದ್ರ ಸರ್ಕಾರ ರಾಜ್ಯಕ್ಕೆ ೨.೩೦ ಲಕ್ಷ ಸಾವಿರ ಕೋಟಿ ರೂ. ನೀಡಿದೆ: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ತೀವ್ರ ಬರಗಾಲದಿಂದ ತತ್ತಿರಿಸಿರುವ ರಾಜ್ಯಕ್ಕೆ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡಿಲ್ಲವೆಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ. ಕೇಂದ್ರ ಸರ್ಕಾರದ ಯಾವುದೇ ಹಣ ಬಾಕಿ ಉಳಿಸಿಕೊಂಡಿಲ್ಲ. ಕೇಂದ್ರ ಸರ್ಕಾರ ರಾಜ್ಯಕ್ಕೆ ೨.೩೦ ಲಕ್ಷ ಸಾವಿರ ಕೋಟಿ ಹಣ ನೀಡಿದೆ. ಆದರೂ ಕಾಂಗ್ರೆಸ್ ಹಣ ನೀಡಿಲ್ಲವೆಂದು ವ್ಯವಸ್ಥಿತವಾಗಿ ಸುಳ್ಳು ಹೇಳುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ, ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಹೇಳಿದರು.

ಹುಬ್ಬಳ್ಳಿಯಲ್ಲಿ ಇಂದು ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯಕ್ಕೆ ಹಣಕಾಸು ಆಯೋಗ ಯಾವುದೇ ಶಿಫಾರಸು ಮಾಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪಕ್ಕೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉತ್ತರ ನೀಡಿದ್ದಾರೆ. ಬರ ನಿರ್ವಹಣೆಯಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಾಗ್ದಾಳಿ ಮಾಡಿದರು.

ಮೋದಿ ಮೋದಿ ಅಂತ ಘೋಷಣೆ ಕೂಗುವ ಯುವಕರ ಕಪಾಳಕ್ಕೆ ಹೊಡೀರಿ ಅಂತ ಸಚಿವ ಶಿವರಾಜ ತಂಡಗಿ ಹೇಳುತ್ತಾರೆ. ಸಿದ್ದರಾಮಯ್ಯ ಈ ಹಿಂದೆ ಮೋದಿಯವರಿಗೆ ಏಕ ವಚನದಲ್ಲಿ ಮಿಸ್ಟರ್ ಮೋದಿ ಅಂತ ಮಾತಾಡಿದ್ದರು. ದೇಶದ ಪ್ರತಿಶತ ೮೦ ರಷ್ಟು ಯುವಕರು ಮೋದಿ ಮೋದಿ ಅಂತಾರೆ. ಕಾಂಗ್ರೆಸ್‌ನವರೇ ನಿಮ್ಮ ಶಕ್ತಿ ತೋರಸಿ. ಕಾಂಗ್ರೆಸ್ ನವರದ್ದು ಯಾವಾಗಲೂ ಹೊಡಿ ಬಡಿ ಸಂಸ್ಕ್ರತಿ. ಇದನ್ನು ನಾನು ತೀವೃವಾಗಿ ಖಂಡಿಸುತ್ತೇನೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular