ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಜೆಡಿಎಸ್ ರಾಜ್ಯಾಧ್ಯಕ್ಷರು ಅದ ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗುವುದರಿಂದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಇಮ್ಮಡಿ ಆಗಲಿದ್ದು, ಕನಿಷ್ಠ ೩ ಲಕ್ಷ ಮತಗಳ ಅಂತರದಿಂದ ಅವರು ಗೆಲುವು ಸಾಧಿಸಲಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಮೇಲೂರು ಗೌತಮ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಖಿಲ್‌ಕುಮಾರಸ್ವಾಮಿಯವರ ಸೋಲನ್ನು ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ.ಮಗ ನಿಖಿಲ್ ಅವರ ಸೋಲಿನಿಂದ ಆದ ನೋವನ್ನು ಕುಮಾರಣ್ಣನವರ ಅಭೂತಪೂರ್ವ ಗೆಲುವಿನ ಮೂಲಕ ನಮ್ಮಂತ ನಿಷ್ಟಾವಂತ ಲಕ್ಷಾಂತರ ಅಭಿಮಾನಿಗಳು ಹಾಗು ಕಾರ್ಯಕರ್ತರ ಸಂತಸ ನೂರ್ಮಡಿಯಾಗಲಿದೆ ಎಂದು ಆಶಿಸಿದ್ದಾರೆ. ಕೆ.ಆರ್.ನಗರ ವಿಧಾನಸಭಾ ಕ್ಷೇತ್ರ ಸೇರಿದಂತೆ ಮಂಡ್ಯ ಲೋಕಸಭಾ ಕ್ಷೇತ್ರದ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲೂ ಕುಮಾರಸ್ವಾಮಿಯವರ ಸ್ಪರ್ಧೆಯಿಂದ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಲಿದ್ದು,ಈ ಹಿಂದೆ ಆದ ಸೋಲಿನ ನೋವನ್ನು ಮರೆಯಲಿದ್ದಾರೆ.ಈ ಮೂಲಕ ಪಕ್ಷವು ರಾಜ್ಯಾದ್ಯಂತ ಮತ್ತಷ್ಟು ಪ್ರಬಲವಾಗಿ ಸಂಘಟಿತವಾಗಲಿದೆ ಎಂದಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದರಿಂದ ಬಿಜೆಪಿ ಕಾರ್ಯಕರ್ತ ಬಂಧುಗಳು ಮೈತ್ರಿಪಕ್ಷ ನಮ್ಮ ಜೆಡಿಎಸ್ ಗೆ ಸಂಪೂರ್ಣ ಸಹಕಾರ ನೀಡಲಿದ್ದು,ಜೆಡಿಎಸ್ ಸ್ಪರ್ಧಿಸಲಿರುವ ಎಲ್ಲಾಮೂರು ಕ್ಷೇತ್ರಗಳಲ್ಲೂ ನಮಗೆ ಅನುಕೂಲವಾಗಲಿದೆ.ಹಾಗೆಯೇ ಉಳಿದ ೨೫ ಕ್ಷೇತ್ರಗಳಲ್ಲೂ ಬಿಜೆಪಿಗೆ ನಮ್ಮ ಪಕ್ಷ ಜೆಡಿಎಸ್ ಎಲ್ಲಾ ವಿಧವಾದ ಸಹಕಾರ ನೀಡಲಿದ್ದು,ಮೈತ್ರಿಪಕ್ಷಗಳು ಎಲ್ಲಾ ೨೮ ಕ್ಷೇತ್ರಗಳಲ್ಲೂ ಜಯಗಳಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.