Monday, April 21, 2025
Google search engine

Homeರಾಜಕೀಯಸುಮಲತಾ ಅಂಬರೀಶ್ ಜೊತೆ ಮಾತುಕತೆಗೆ ನಾವು ಸಿದ್ಧ: ನಿಖಿಲ್ ಕುಮಾರಸ್ವಾಮಿ

ಸುಮಲತಾ ಅಂಬರೀಶ್ ಜೊತೆ ಮಾತುಕತೆಗೆ ನಾವು ಸಿದ್ಧ: ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ಅಗತ್ಯ ಬಿದ್ದರೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರೊಂದಿಗೆ ಮಾತುಕತೆ ನಡೆಸಲು ನಾವು ಸಿದ್ಧರಿದ್ದೇವೆ ಅಂತ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

ಮಾಜಿ ಸಚಿವ ನಾರಾಯಣಗೌಡರ ಮನವೊಲಿಕೆಯಂತೆ ಸುಮಲತಾ ಅವರ ಮನವೊಲಿಕೆ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಶ್ವಥ್ ನಾರಾಯಣ್ ಮತ್ತು ಪುಟ್ಟರಾಜು ಅವರ ಸಮ್ಮುಖದಲ್ಲಿ ಕುಮಾರಸ್ವಾಮಿ ಅವರು ನಾರಾಯಣಗೌಡ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ನಾರಾಯಣಗೌಡರು ನಮ್ಮ ಪಕ್ಷದಿಂದಲೇ ಶಾಸಕ ಆಗಿದ್ದರು. ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳು ಇರೋದು ಸಹಜ. ಈಗ ಎಲ್ಲವೂ ಸರಿ ಆಗಿದೆ. ವೈಯಕ್ತಿಕವಾಗಿ ಕುಮಾರಸ್ವಾಮಿ ಮೇಲೆ ನಾರಾಯಣಗೌಡರು ಗೌರವ ಇಟ್ಟುಕೊಂಡಿದ್ದಾರೆ. ಕುಮಾರಸ್ವಾಮಿ ಪರ ಕೆಲಸ ಮಾಡೋದಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ನಾವು ಸುಮಲತಾ ಅವರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡ್ತೀವಿ. ಅಗತ್ಯ ಬಿದ್ದರೆ ಅವರ ಜೊತೆಗೂ ಮಾತುಕತೆ ನಡೆಸುತ್ತೇವೆ. ಒಟ್ಟಾರೆ ನಮಗೆ ಆರೋಗ್ಯರ ಚುನಾವಣೆ ಆಗಬೇಕು ಎನ್ನುವ ಮೂಲಕ ಸುಮಲತಾ ಜೊತೆ ಮಾತುಕತೆಗೂ ಸಿದ್ಧ ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular