ಬೆಳಗಾವಿ : ಸುಮಲತಾ ಸಮಾಧಾನದಿಂದ ಇದ್ದರೆ ಮುಂದೆ ಅವಕಾಶ ಸಿಗುತ್ತೆ, ಅವರು ಸಮಾಧಾನದಿಂದ ಇರಲಿ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಂಡ್ಯದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಸ್ಪರ್ಧೆ ಬಹುತೇಕ ಫಿಕ್ಸ್ ಆಗಿದೆ. ಸುಮಲತಾ ಅವರಿಗೆ ಬೇರೆ ಅವಕಾಶ ಇದೆ. ಸುಮಲತಾ ಸಮಾಧಾನದಿಂದ ಇದ್ದರೆ ಮುಂದೆ ಅವಕಾಶ ಸಿಗುತ್ತೆ ಎಂದು ಹೇಳಿದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ೨೮ಕ್ಕೆ ೨೮ ಕ್ಷೇತ್ರ ಗೆಲ್ಲಿಸಬೇಕು ಎಂಬುದು ನಮ್ಮ ಗುರಿ ಎಂದು ಯಡಿಯೂರಪ್ಪ ಹೇಳಿದರು.
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಪಕ್ಷದ ಸಂಘಟನೆ ಮತ್ತು ನಮ್ಮ ಕಾರ್ಯಕರ್ತರನ್ನು ಹುರಿದುಂಬಿಸುವ ಉದ್ದೇಶದಿಂದ, ಪಕ್ಷದ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರೊಂದಿಗೆ ಇಂದು ಬೆಳಗಾವಿಗೆ ಭೇಟಿ ನೀಡಲಾಯಿತು. ಅತ್ಯಂತ ಪ್ರೀತಿ ಉತ್ಸಾಹಗಳಿಂದ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ನಮ್ಮ ಕಾರ್ಯಕರ್ತರೊಂದಿಗೆ ಬೈಕ್ ರ್ಯಾಲಿ ನಡೆಸಲಾಯಿತು. ಈ ಬಾರಿಯೂ ಬೆಳಗಾವಿಯಲ್ಲಿ ಬಿಜೆಪಿ ಗೆಲುವಿನ ಧ್ವಜ ಹಾರಾಡಲಿದೆ. ರಾಜ್ಯದ ಎಲ್ಲ ಕಡೆಯಲ್ಲಿಯೂ ಇದೇ ರೀತಿಯ ವಾತಾವರಣವಿದ್ದು, ಮತ್ತೊಮ್ಮೆ ಮೋದಿ ಸರ್ಕಾರ ಬರುವುದು ಸುನಿಶ್ಚಿತವಾಗಿದೆ ಎಂದು ಹೇಳಿದರು.