Sunday, April 20, 2025
Google search engine

Homeರಾಜ್ಯಮದ್ಯ ಸಾಗಿಸುವ ವಾಹನ ಪಲ್ಟಿ:  ನೂರಾರು ಬಾಕ್ಸ್‌‌ ಚೆಲ್ಲಾಪಿಲ್ಲಿ

ಮದ್ಯ ಸಾಗಿಸುವ ವಾಹನ ಪಲ್ಟಿ:  ನೂರಾರು ಬಾಕ್ಸ್‌‌ ಚೆಲ್ಲಾಪಿಲ್ಲಿ

ಚನ್ನಮ್ಮನ ಕಿತ್ತೂರು: ಮದ್ಯ ಸಾಗಿಸುವ ವಾಹನ ಪಲ್ಟಿಯಾಗಿ, ಅದರಲ್ಲಿದ್ದ ನೂರಾರು ಮದ್ಯದ ಬಾಕ್ಸ್‌ ‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಘಟನೆ ಪಟ್ಟಣದ ಬಳಿಯಿರುವ ಶಿವಾ ಪೆಟ್ರೋಲ್ ಪಂಪ್ ನ ರಾ.ಹೆ. 4 ರಲ್ಲಿ ಮಾ.28ರ ಮುಂಜಾನೆ ನಡೆದ ಬಗ್ಗೆ ವರದಿ ಸ್ಥಳೀಯರಿಂದ ಲಭ್ಯವಾಗಿದೆ.

ಪಲ್ಟಿಯಾದ ವಾಹನ ಅಬಕಾರಿ ಇಲಾಖೆಗೆ ಸೇರಿದ್ದು ಎಂದು ತಿಳಿದು ಬಂದಿದ್ದು, ಘಟನಾ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಆಗಮಿಸಿ ವಾಹನದಲ್ಲಿದ್ದ ಹಾಗೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮದ್ಯದ ಬಾಕ್ಸ್ ಗಳನ್ನು ಬೇರೆ ವಾಹನಕ್ಕೆ ವರ್ಗಾಯಿಸುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ಘಟನೆಗೆ ನಿಖರ ಮತ್ತು ಸ್ಪಷ್ಟ ಮಾಹಿತಿ ಲಭ್ಯವಾಗದ ಕಾರಣ ಅಧಿಕಾರಿಗಳ ತನಿಖೆಯ ಬಳಿಕ ಮದ್ಯ ಅಬಕಾರಿ ಇಲಾಖೆಯದ್ದೊ ಅಥವಾ ಖಾಸಗಿಯದ್ದೂ ಎಂದು ತನಿಖಾ ವರದಿಯ ನಂತರ ಸ್ಪಷ್ಟವಾಗಲಿದೆ.

RELATED ARTICLES
- Advertisment -
Google search engine

Most Popular