ಮೈಸೂರು: ಭೂಮಿಕಾ ಅಸೋಸಿಯೇಟ್ಸ್ ಹಾಗೂ ದಿವಂಗತ ಮೈಕ್ ಚಂದ್ರು ಗೆಳೆಯರ ಬಳಗದ ಸಂಯುಕ್ತಾಶ್ರಯದಲ್ಲಿ ಮಾ.೩೦ರಂದು ಸಂಜೆ ೫ ಗಂಟೆಗೆ ನಗರದ ಕೃಷ್ಣಮೂರ್ತಿಪುರಂ ಶಾರದಾ ವಿಲಾಸ ಕಾಲೇಜು ಶತಮಾನೋತ್ಸವ ಭವನದಲ್ಲಿ ಗಾನಸಿರಿ ಎಂಬ ಹಳೆಯ ಸುಮಧುರ ಚಿತ್ರಗೀತೆಗಳ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ನಿರೂಪಕ ಮಂಜುನಾಥ್ ತಿಳಿಸಿದರು.
ಕನ್ನಡ, ಹಿಂದಿ, ತಮಿಳು ಹಾಗೂ ತೆಲುಗು ಚಿತ್ರಗೀತೆಗಳನ್ನು ದೂರದರ್ಶನ ಹಾಗೂ ಖಾಸಗಿ ವಾಹಿನಿಗಳ ಖ್ಯಾತ ಕಲಾವಿದರು ಹಾಡಲಿದ್ದಾರೆ. ಒಟ್ಟು ೨೮ ರಿಂದ ೩೦ ಹಾಡುಗಳು ಇರಲಿದ್ದು, ಇವುಗಳಲ್ಲಿ ೧೪ ಕನ್ನಡದವಾಗಿವೆ. ಉಳಿದವು ಇತರೆ ಭಾಷೆಯದಾಗಿವೆ. ರಿದಮ್ ಪ್ಯಾಡ್ ಕಲಾವಿದ ವಿನಯ್ ರಂಗಧೋಳ್ ಸಾರಥ್ಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಇದು ವಾದ್ಯಗಳ ಬಳಕೆಯ ಲೈವ್ ಕಾರ್ಯಕ್ರಮ ಆಗಿರಲಿದೆ. ಎಲ್ಲರಿಗೂ ಉಚಿತ ಪ್ರವೇಶವಿದ್ದು, ಯಾವುದೇ ಸಭಾ ಕಾರ್ಯಕ್ರಮ ಇರುವುದಿಲ್ಲ ಎಂದು ಮಾಹಿತಿ ನೀಡಿದರು.