Monday, April 21, 2025
Google search engine

Homeಸಿನಿಮಾನಿರ್ಮಾಪಕ ಭಾಮಾ ಹರೀಶ್’ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

ನಿರ್ಮಾಪಕ ಭಾಮಾ ಹರೀಶ್’ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

ಸಿನಿಮಾ ನಿರ್ಮಾಪಕ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಭಾಮಾ ಹರೀಶ್ ಅವರಿಗೆ ಇಂದು ಬೆಳಿಗ್ಗೆ ಹೃದಯಾಘಾತವಾಗಿದ್ದು, ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭಾಮಾ ಹರೀಶ್ ಅವರನ್ನು ತೀವ್ರ ನಿಗಾ ಘಟನದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.

ದರ್ಶನ್ ಮೊದಲ ಸಿನಿಮಾ ‘ಮೆಜೆಸ್ಟಿಕ್’ ಸಿನಿಮಾದ ಸಹ ನಿರ್ಮಾಣ ಸೇರಿದಂತೆ ಹಲವು ಕನ್ನಡ ಸಿನಿಮಾಗಳನ್ನು ಭಾಮಾ ಹರೀಶ್ ನಿರ್ಮಾಣ ಮಾಡಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಪ್ಪು ನಿಧನವಾದ ಬಳಿಕ ವಾಣಿಜ್ಯ ಮಂಡಳಿಯಿಂದ ಕಾರ್ಯಕ್ರಮವನ್ನು ಮಾಡಿಸಿದ್ದರು. ಮಾತ್ರವಲ್ಲದೆ ಇನ್ನೂ ಕೆಲವು ಕಾರ್ಯಕ್ರಮಗಳನ್ನು ಭಾಮಾ ಹರೀಶ್ ಮಾಡಿಸಿದ್ದರು.

ಭಾಮಾ ಹರೀಶ್​ ಅವರಿಗೆ ಹೈಬಿಪಿ ಹಾಗೂ ಉಸಿರಾಟದ ತೊಂದರೆ ಉಂಟಾಗಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಅವರ ಕುಟುಂಬ ವರ್ಗದವರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರ ವರದಿಗಾಗಿ ಕುಟುಂಬ ವರ್ಗದವರು ಕಾಯುತ್ತಿದ್ದು, ಕೆಲವೇ ನಿಮಿಷಗಳಲ್ಲಿ ಭಾಮಾ ಹರೀಶ್​ರ ಆರೋಗ್ಯ ಸ್ಥಿತಿಯ ಮಾಹಿತಿ ಹೊರಬೀಳಲಿದೆ.

RELATED ARTICLES
- Advertisment -
Google search engine

Most Popular