Sunday, April 20, 2025
Google search engine

Homeರಾಜ್ಯಸರ್ಕಾರಿ ನೌಕರಿಗಳಲ್ಲಿ ಶೇ.೫೦ ಮಹಿಳಾ ಮೀಸಲಾತಿಗೆ ರಾಹುಲ್ ಗಾಂಧಿ ಬೆಂಬಲ

ಸರ್ಕಾರಿ ನೌಕರಿಗಳಲ್ಲಿ ಶೇ.೫೦ ಮಹಿಳಾ ಮೀಸಲಾತಿಗೆ ರಾಹುಲ್ ಗಾಂಧಿ ಬೆಂಬಲ


ನವದೆಹಲಿ: ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸರ್ಕಾರಿ ನೌಕರಿಗಳಲ್ಲಿ ಮಹಿಳೆಯರಿಗೆ ಶೇ.೫೦ ರಷ್ಟು ಮೀಸಲಾತಿ ಜಾರಿಗೊಳಿಸುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ಶಕ್ತಿಯುತ ಮಹಿಳೆಯರಿಂದ ಮಾತ್ರ ದೇಶದ ಭವಿಷ್ಯ ಬದಲಿಸಲು ಸಾಧ್ಯ ಎಂದು ತಿಳಿಸಿದ್ದಾರೆ.

ಇಂದು ದೇಶದಲ್ಲಿ ಮೂವರಲ್ಲಿ ಒಬ್ಬ ಮಹಿಳೆ ಕೆಲಸ ಮಾಡುತ್ತಿದ್ದರೆ, ೧೦ ಮಂದಿಯಲ್ಲಿ ಒಬ್ಬ ಮಹಿಳೆ ಮಾತ್ರ ಸರ್ಕಾರಿ ನೌಕರಿಯಲ್ಲಿದ್ದಾರೆ. ಭಾರತದಲ್ಲಿ ಮಹಿಳೆಯರ ಜನಸಂಖ್ಯೆ ಶೇ.೫೦ ರಷ್ಟು ಇಲ್ಲವೆ ಇಷ್ಟು ಮಹಿಳೆಯರಲ್ಲಿ ಪ್ರೌಢಶಿಕ್ಷಣ ಹಾಗೂ ಉನ್ನತ ಶಿಕ್ಷಣ ಪಡೆದವರಿದ್ದರೂ ಅವರಿಗೆ ಸಿಗಬೇಕಾದ ಸಮಪಾಲು ಏಕೆ ಸಿಗುತ್ತಿಲ್ಲ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.

ಅರ್ಧ ಜನಸಂಖ್ಯೆಯಲ್ಲಿ ಪೂರ್ಣ ಹಕ್ಕು ನೀಡುವುದನ್ನು ಕಾಂಗ್ರೆಸ್ ನಂಬುತ್ತದೆ. ದೇಶವನ್ನು ಮುನ್ನಡೆಸಬೇಕಾದರೆ ಮಹಿಳೆಯರಿಗೆ ಸಮಾನ ಪಾಲು ನೀಡಿದರೆ ಮಾತ್ರ ಮಹಿಳೆಯರ ಸಂಪೂರ್ಣ ಸಾಮರ್ಥ್ಯವನ್ನು ಸದ್ಭಳಕೆ ಮಾಡಿಕೊಳ್ಳಬಹುದು ಎಂದು ರಾಹುಲ್ ತಿಳಿಸಿದರು.

RELATED ARTICLES
- Advertisment -
Google search engine

Most Popular