ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ರಾಜ್ಯ ಅರಣ್ಯ ವಿಹಾರ ಧಾಮದ ಮಾಜಿ ಅಧ್ಯಕ್ಷ ಹಾಗೂ ರಾಜ್ಯ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಎಂ. ಅಪ್ಪಣ್ಣ ರವರನ್ನು ಭೇಟಿ ಮಾಡಿ ಬೆಂಬಲ ಕೋರಿದರು.
ಸರಸ್ವತಿಪುರಂನಲ್ಲಿರುವ ಎಂ.ಅಪ್ಪಣ್ಣ ರವರ ಕಛೇರಿಗೆ ಶುಕ್ರವಾರ ಬಿಜೆಪಿ ಮುಖಂಡರೊಂದಿಗೆ ಭೇಟಿ ನೀಡಿದ ಯಧುವೀರ್ ರವರು ಮಾತನಾಡಿ ನಾಯಕ ಸಮಾಜ ಮಹಾರಾಜರ ಕಾಲದಿಂದಲೂ ಬೆಂಬಲಿಸಿಕೊಂಡು ಬಂದಿದೆ. ಈ ಬಾರಿ ನಾನು ಬಿ.ಜೆ.ಪಿ, ಜೆ.ಡಿ.ಎಸ್ ನ ಸಂಯುಕ್ತ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿ ಇದ್ದೇನೆ. ಭಾರತದ ಅಭಿವೃದ್ಧಿಗೆ ಮೋದಿಯವರ ಕೈ ಬಲಪಡಿಸಲು ನನ್ನನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಎಂ. ಅಪ್ಪಣ್ಣ ಮಾತನಾಡಿ ಬಿ.ಜೆ.ಪಿ ಪಕ್ಷ ನಮ್ಮ ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡಿದೆ. ವಾಲ್ಮೀಕಿ ಗುರುಪೀಠ, ಜಿಲ್ಲಾ ನಾಯಕ ಸಂಘ, ನಾಯಕರ ಸರ್ಕಾರಿ ನೌಕರರ ಸಂಘ, ನಾಯಕರ ಯುವ ಸಂಘಟನೆಗಳ ಜೊತೆಗೆ ನಮ್ಮೆಲ್ಲರ ಹೋರಾಟದ ಪರವಾಗಿ ಮೈಸೂರು ವಿಭಾಗದ ಜ್ವಲಂತ ಸಮಸ್ಯೆಯಾಗಿದ್ದ ಪರಿವಾರವನ್ನು ಎಸ್.ಟಿ ಗೆ ಸೇರ್ಪಡೆ ಮಾಡಿದ್ದಾರೆ. ಇದ್ದಕ್ಕಾಗಿ ಯಡಿರೂರಪ್ಪ ರವರು ಅನಂತ್‌ಕುಮಾರ್ ರವರು ಪ್ರತಾಪ್ ಸಿಂಹ, ಸದಾನಂದ ಗೌಡರು ಹಾಗೂ ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ. ಇದಲ್ಲದೆ ಮಹರ್ಷಿ ವಾಲ್ಮೀಕಿ ನಿಗಮ, ಪ್ರತ್ಯೇಕ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ ಸ್ಥಾಪನೆ ಶೇ.೭% ಮೀಸಲಾತಿ ಹೆಚ್ಚಳ, ಅಯೋಧ್ಯೆಯ ವಿಮಾನ ನಿಲ್ದಾಣಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ಹೆಸರು ಇಟ್ಟಿದ್ದಾರೆ ಆದ್ದರಿಂದ ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಯ ಬಿ.ಜೆ.ಪಿ ಮತ್ತು ಜೆ.ಡಿ.ಎಸ್. ಸಂಯುಕ್ತ ಅಭ್ಯರ್ಥಿಗಳ ಪರವಾಗಿ ಪಕ್ಷದ ಸೂಚನೆಯ ಮೇರೆಗೆ ಕೆಲಸ ಮಾಡುವುದರ ಜೊತೆಗೆ ಯಧುವೀರ್ ರವರ ಗೆಲುವಿಗಾಗಿ ಶ್ರಮಿಸುವುದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ಚಾಮರಾಜ ನಗರ ಜಿ.ಪಂ ಮಾಜಿ ಅಧ್ಯಕ್ಷ ಹದೇವಯ್ಯ, ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಜೇಂದ್ರ, ಮೈ.ವಿ ರವಿಶಂಕರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಲ್. ಆರ್ ಮಹದೇವಸ್ವಾಮಿ, ಉದ್ಯಮಿ ಶಬರೀಶ್, ಮಹೇಶ್, ವಸಂತ್ ಕುಮಾರ್, ಪ್ರಭಾಕರ್, ರಾಜು, ಸುರೇಶ್, ನಾಗೇಂದ್ರ ಹಾಗೂ ನಾಯಕ ಸಮಾಜದ ಮುಖಂಡರು ಹಾಜರಿದ್ದರು.