Monday, April 21, 2025
Google search engine

Homeರಾಜ್ಯತಡೆರಹಿತ ವಿದ್ಯುತ್ ಪೂರೈಕೆಗಾಗಿ KPTCL ನಿಂದ ಅತ್ಯಾಧುನಿಕ ತಂತ್ರಜ್ಞಾನ ಬಳಕೆ

ತಡೆರಹಿತ ವಿದ್ಯುತ್ ಪೂರೈಕೆಗಾಗಿ KPTCL ನಿಂದ ಅತ್ಯಾಧುನಿಕ ತಂತ್ರಜ್ಞಾನ ಬಳಕೆ

ಬೆಂಗಳೂರು: ಗ್ರಾಹಕರಿಗೆ ತಡೆರಹಿತ ವಿದ್ಯುತ್ ಸರಬರಾಜು ಸೇರಿದಂತೆ ನಿರ್ವಹಣೆ/ದುರಸ್ತಿ ಸಮಯದಲ್ಲಿ ವಿದ್ಯುತ್ ಲೈನ್ ಸ್ಥಗಿತಗೊಳ್ಳುವುದನ್ನು ತಡೆಯುವ ಪ್ರಯತ್ನದಲ್ಲಿ, ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಾರ್ಪೊರೇಷನ್ ಲಿಮಿಟೆಡ್  ಇನ್ಸುಲೇಟೆಡ್ ಏರಿಯಲ್ ವರ್ಕ್ ಪ್ಲಾಟ್‌ಫಾರ್ಮ್ ವಾಹನಗಳನ್ನು ಟ್ರಾನ್ಸ್‌ಮಿಷನ್ ಲೈನ್ ಮತ್ತು ಸಬ್‌ಸ್ಟೇಷನ್‌ಗಳಿಗಾಗಿ ನಿಯೋಜಿಸಲಿದೆ. 

ಈಗಾಗಲೇ ಬೆಂಗಳೂರು, ಚಿತ್ರದುರ್ಗ ಮತ್ತು ಹುಬ್ಬಳ್ಳಿಯಲ್ಲಿ ಇನ್ಸುಲೇಟೆಡ್ ಏರಿಯಲ್ ವರ್ಕ್ ಪ್ಲಾಟ್‌ಫಾರ್ಮ್ ವಾಹನಗಳು ಕಾರ್ಯ ನಿರ್ವಹಿಸುತ್ತಿದ್ದು,

ಮೈಸೂರು ಮತ್ತು ಗುಲ್ಬರ್ಗ ವಲಯಕ್ಕಾಗಿ ಇನ್ನೆರಡು ಇನ್ಸುಲೇಟೆಡ್ ಏರಿಯಲ್ ವರ್ಕ್ ಪ್ಲಾಟ್‌ಫಾರ್ಮ್ ವಾಹನಗಳು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿವೆ.

 ಈ ವಾಹನಗಳ ವಿಶೇಷತೆ ಎಂದರೆ ನಿರ್ವಹಣೆ/ದುರಸ್ತಿ ಸಂದರ್ಭದಲ್ಲಿ ಲೈನ್ ಗಳಲ್ಲಿ  ವಿದ್ಯುತ್ ಪ್ರಸರಣವನ್ನು ಸ್ಥಗಿತಗೊಳಿಸದೆ ನಿರ್ವಹಣೆ/ದುರಸ್ತಿ ಮಾಡಬಹುದಾಗಿದೆ.

Hotline/live line ಗಳನ್ನು ಕೆಪಿಟಿಸಿಎಲ್ ನ ಎಂಜಿನಿಯರ್ ಗಳು ನೇರವಾಗಿ ಮುಟ್ಟಿ ದೋಷ ಸರಿಪಡಿಸಲು ಸಾಧ್ಯವಾಗಲಿದೆ.  ಇದರಿಂದ

ಕೆಪಿಟಿಸಿಎಲ್‌ಗೆ ಉಂಟಾಗುತ್ತಿದ್ದ ಆರ್ಥಿಕ ನಷ್ಟವನ್ನು ತಪ್ಪಿಸಬಹುದಾಗಿದೆ ಹಾಗೂ  ಗ್ರಾಹಕರಿಗೆ ನಿರಂತರ ವಿದ್ಯುತ್ ಪೂರೈಕೆಯನ್ನು ಸಕ್ರಿಯಗೊಳಿಸುತ್ತದೆ ಎಂದು ಕೆಪಿಟಿಸಿಎಲ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ಪಂಕಜ್ ಕುಮಾರ್ ಪಾಂಡೆ ಇಂದು ತಿಳಿಸಿದ್ದಾರೆ

ಸಾಂಪ್ರದಾಯಿಕ ಶೈಲಿಯ ನಿರ್ವಹಣೆಗೆ ವಿದ್ಯುತ್ ಲೈನ್ ಸ್ಥಗಿತಗೊಳಿಸುವ ಅಗತ್ಯವಿದೆ ಮತ್ತು ವಿದ್ಯುತ್ ಮರು ಸಂಪರ್ಕಕ್ಕೆ ಕನಿಷ್ಠ  5 ಗಂಟೆಗಳ ಸಮಯವು ಬೇಕಾಗುತ್ತದೆ. ಇದು ಸಾರ್ವಜನಿಕರ ದೈನಂದಿನ  ಜೀವನ ಹಾಗೂ ವಾಣಿಜ್ಯ ವ್ಯವಹಾರಗಳಿಗೆ

ಅನಾನುಕೂಲತೆಯನ್ನು ಉಂಟುಮಾಡುತ್ತದೆ. ಹಾಟ್ (ಲೈವ್) ಲೈನ್ ನಿರ್ವಹಣೆ ತಂತ್ರದೊಂದಿಗೆ, ಕೆಪಿಟಿಸಿಎಲ್ ಅತ್ಯಾಧುನಿಕ ಉಪಕರಣಗಳಾದ ಇನ್ಸುಲೇಟೆಡ್ ಬಕೆಟ್ ವ್ಯಾನ್, ಇನ್ಸುಲೇಟೆಡ್ ಬಕೆಟ್, ಇನ್ಸುಲೇಟೆಡ್ ಸ್ಕ್ಯಾಫೋಲ್ಡಿಂಗ್ ಅನ್ನು ಬಳಸಿಕೊಂಡು ವಿದ್ಯುತ್ ಸ್ಥಗಿತಗೊಳಿಸದೆ ನಿರ್ವಹಣಾ ಚಟುವಟಿಕೆಯನ್ನು ಕೈಗೊಳ್ಳಲು ಉದ್ದೇಶಿಸಿದೆ, ಹೀಗಾಗಿ ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಸಾಧ್ಯ ಮತ್ತು ಇದು ರಾಜ್ಯದ ESCOM ಗಳನ್ನು ಆರ್ಥಿಕ ಸಬಲಗೊಳಿಸಲಿದೆ ಎಂದು ಪಂಕಜ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

ಬ್ರೆಜಿಲ್ ದೇಶದಿಂದ ಆಮದು ಮಾಡಿಕೊಳ್ಳಲಾಗಿರುವ ಇನ್ಸುಲೇಟೆಡ್ ಏರಿಯಲ್ ವರ್ಕ್ ಪ್ಲಾಟ್‌ ಫಾರ್ಮ್ ವಾಹನಗಳ ನಿರ್ವಹಣೆ ಕುರಿತ ತರಬೇತಿಯನ್ನು ಈಗಾಗಲೇ 15 ಎಂಜಿನಿಯರ್ ಗಳ ತಂಡಕ್ಕೆ ನೀಡಲಾಗಿದ್ದು, ನೆಲಮಂಗಲದ 220 kv ಸ್ಟೇಷನ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ತಂಡದ ಕಾರ್ಯವೈಖರಿಯನ್ನು ವ್ಯವಸ್ಥಾಪಕ ನಿರ್ದೇಶಕರು ಪರಿಶೀಲಿಸಿದರು.

RELATED ARTICLES
- Advertisment -
Google search engine

Most Popular