Monday, April 21, 2025
Google search engine

Homeಸ್ಥಳೀಯಪ್ರತಿಷ್ಠಿತ ENBA ಪ್ರಶಸ್ತಿ ಮುಡಿಗೇರಿಸಿಕೊಂಡ ಮೈಸೂರು ಹಿರಿಯ ವರದಿಗಾರ ರವಿ ಪಾಂಡವಪುರ

ಪ್ರತಿಷ್ಠಿತ ENBA ಪ್ರಶಸ್ತಿ ಮುಡಿಗೇರಿಸಿಕೊಂಡ ಮೈಸೂರು ಹಿರಿಯ ವರದಿಗಾರ ರವಿ ಪಾಂಡವಪುರ

ಮೈಸೂರು:  ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಉತ್ತಮ ವರದಿಗಾರಿಕೆ, ಕವರೇಜ್ ಗೆ ಮೈಸೂರು ಹಿರಿಯ ವರದಿಗಾರ ರವಿ ಪಾಂಡವಪುರ ಅವರಿಗೆ ಈ ವರ್ಷವೂ ಪ್ರತಿಷ್ಠಿತ ENBA ಪ್ರಶಸ್ತಿ ಲಭಿಸಿದೆ.

ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಮೈಸೂರು ಜಿಲ್ಲಾ ಹಿರಿಯ ವರದಿಗಾರ ರವಿಪಾಂಡವಪುರ ಅವರು ಸ್ಯಾಂಟ್ರೋರವಿ ಪ್ರಕರಣ ಸಂಬಂಧ ನಿರಂತರ ವರದಿ ಪ್ರಕಟಿಸಿದ್ದರು. ಲೈಂಗಿಕ ದೌರ್ಜನ್ಯ, ಅಧಿಕಾರಿಗಳಿಗೆ ಬೆದರಿಕೆ, ಹೆಂಡತಿಗೆ ಕಿರುಕುಳ ಸೇರಿ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಹೊರ ರಾಜ್ಯಕ್ಕೆ ಪರಾರಿಯಾಗಿದ್ದ ಸ್ಯಾಂಟ್ರೋರವಿ ಪ್ರಕರಣದ ಸವಿವರ ವರದಿ ಪ್ರಕಟಿಸಿದ್ದರು.

ಒಡನಾಡಿ ಸೇವಾ ಸಂಸ್ಥೆ ಮೂಲಕ ಬೆಳಕಿಗೆ ಬಂದಿದ್ದ ಪ್ರಕರಣದ ವರದಿಯನ್ನ ಬೆನ್ನತ್ತಿದ್ದ ರವಿಪಾಂಡವಪುರ ಅವರು ಸ್ಯಾಂಟ್ರೋರವಿ ಬಂಧನವರೆಗೂ ಎಲ್ಲಾ ವರದಿಗಳನ್ನ ನ್ಯೂಸ್ ಫಸ್ಟ್ ವರದಿಗಾರ ರವಿಪಾಂಡವಪುರ ಬಿತ್ತರಿಸಿದ್ದರು. ಈ ಕಾರಣಕ್ಕೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಗ್ರ ವರದಿ ಭಿತ್ತರಕ್ಕೆ ಪ್ರತಿಷ್ಠಿತ ENBA ಪ್ರಶಸ್ತಿ ವಿಭಾಗದಲ್ಲಿ ಕಂಚಿನ ಪದಕ ಲಭಿಸಿದೆ.

ಇನ್ನು, ರವಿಪಾಂಡವಪುರ ಅವರಿಗೆ ಮುರುಘಾ ಶ್ರೀ ಬಂಧನ ಪ್ರಕರಣದಲ್ಲಿ ಕಳೆದ ಸಾಲಿನಲ್ಲೂ ಪ್ರತಿಷ್ಟಿತ ENBA ಅವಾರ್ಡ್ ಲಭಿಸಿತ್ತು. ಸಮಗ್ರ ವರದಿ ಭಿತ್ತರಕ್ಕಾಗಿ ಚಿನ್ನದ ಪದಕ ಲಭಿಸಿತ್ತು.

RELATED ARTICLES
- Advertisment -
Google search engine

Most Popular