Monday, April 21, 2025
Google search engine

Homeರಾಜ್ಯಸುದ್ದಿಜಾಲನಡುರಸ್ತೆಯಲ್ಲೇ ಇಫ್ತಾರ್ ಕೂಟ, ಆಯೋಜಕರಿಗೆ ಚುನಾವಣಾ ಆಯೋಗ ನೋಟಿಸ್

ನಡುರಸ್ತೆಯಲ್ಲೇ ಇಫ್ತಾರ್ ಕೂಟ, ಆಯೋಜಕರಿಗೆ ಚುನಾವಣಾ ಆಯೋಗ ನೋಟಿಸ್

ಮಂಗಳೂರು: ನಗರದ ಹೊರವಲಯದಲ್ಲಿರುವ ಮುಡಿಪುವಿನಲ್ಲಿ ನಡುರಸ್ತೆಯಲ್ಲಿ ನಡೆದ ಇಫ್ತಾರ್ ಕೂಟದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಚುನಾವಣಾ ಆಯೋಗವು ಆಯೋಜಕರಿಗೆ ಇಂದು ಸೋಮವಾರ ನೋಟಿಸ್ ಜಾರಿಗೊಳಿಸಿದೆ.

ಮುಡಿಪು ಪೇಟೆಯ ರಾಜ್ಯ ಹೆದ್ದಾರಿಯಲ್ಲೇ ಶುಕ್ರವಾರ ಸಂಜೆ ಆಟೋ ರಾಜಕನ್ಮಾರ್ ಜಿಲ್ಲಾ ಆಟೋ ಚಾಲಕರ ಸಂಘಟನೆಯು ಸೌಹಾರ್ದ ಇಫ್ತಾರ್ ಕೂಟ ನಡೆಸಿತ್ತು. ಇದರ ವಿಡಿಯೋ ಸೆರೆ ಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಇಫ್ತಾರ್ ಕೂಟದಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗಿದೆ ಎಂದು ಆರೋಪಿಸಿ ಹಿಂದೂ ಜಾಗರಣಾ ವೇದಿಕೆ ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್ ಎಸ್.ಜೆ. ಅವರಿಗೆ ಲಿಖಿತ ದೂರು ನೀಡಿದೆ. ದೂರು ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿತ್ತು.

ಸದ್ಯ ಚುನಾವಣಾ ಆಯೋಗದಿಂದ ಇಫ್ತಾರ್ ಕೂಟದ ಆಯೋಜಕರಿಗೆ ಅನುಮತಿ ಪತ್ರ ಹಾಗೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ನೋಟಿಸ್ ಜಾರಿಯಾಗಿದೆ.

RELATED ARTICLES
- Advertisment -
Google search engine

Most Popular