ಮಂಗಳೂರು: ಮಹತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ, ಕಡೇಶಿವಾಲಯದಲ್ಲಿ 1-4-2024 ರಂದು ಗೊನೆ ಮೂಹೂರ್ತ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಬಂಟ್ವಾಳ ತಹಶೀಲ್ದಾರ್ ಅರ್ಚನ ಭಟ್, ಗ್ರಾಮ ಆಡಳಿತಾಧಿಕಾರಿ ಕರಿಬಸಪ್ಪ ನಾಯ್ಕ, ಅರ್ಚಕರಾದ ಎಂ. ಸುಬ್ರಹ್ಮಣ್ಯ ಭಟ್ ಮುಂಗೂರು, ಕೆ. ಅನಂತಪದ್ಮನಾಭ ಭಟ್ ರಥಬೀದಿ ಕಡೇಶಿವಾಲಯ ಮತ್ತು ಜಾತ್ರಾ ಉತ್ಸವ ಸಮಿತಿಯ ಸದಸ್ಯರು ಹಾಗೂ ಭಕ್ತಾದಿಗಳು ಹಾಜರಿದ್ದರು.