ಮೈಸೂರು : ಅಮಾಯಕರಿಗೆ ಹೆಚ್ಚಿಗೆ ಹಣವನ್ನು ನೀಡುವುದಾಗಿ ಅಮಿಷವೊಡ್ಡಿ ಹಣ ಪಡೆದುಕೊಂಡು ವಾಪಸ್ ನೀಡದೆ ವಂಚಿಸಿರುವ ಚಾಮರಾಜಪುರಂ ವಾಣಿ ವಿಲಾಸ ರಸ್ತೆಯಲ್ಲಿರುವ ಫರ್‌ಫೆಕ್ಟ್ ವೆಂಚರ್ ಕಂಪನಿ ಸಿಇಓ ವಿರುದ್ಧ ಲಕ್ಷ್ಮೀಪುರಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸದರಿ ಕಂಪನಿಯಲ್ಲಿ ಹೂಡಿಕೆ ಮಾಡಿ ಹಣವನ್ನು ಕಳೆದುಕೊಂಡಿರುವ ಸಾರ್ವಜನಿಕರು ಹಣ ಪಾವತಿಸಿರುವ ಬಗ್ಗೆ ತಮ್ಮ ಬಳಿ ಇರುವ ದಾಖಲಾತಿಗಳೊಂದಿಗೆ ಮೈಸೂರು ನಗರದ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಸಂಪರ್ಕಿಸಲು ಸೂಚಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಹಣವನ್ನು ಗಳಿಸಲು ಈ ರೀತಿಯ ಕಂಪನಿಗಳ ಅಮಿಷಕ್ಕೆ ಒಳಪಡದೆ ಜಾಗರೂಕತೆಯಿಂದ ಇರಲು ಮೈಸೂರುನಗರದ ಪೊಲೀಸ್ ಆಯುಕ್ತರಾದ ಬಿ.ರಮೇಶ್ ತಿಳಿಸಿದ್ದಾರೆ.